ಪೆರ್ಲ : ಇಡಿಯಡ್ಕದಿಂದ ಪುತ್ತಿಗೆಗೆ ತೆರಳುವ (ಪೆರ್ಲ-ಕುಂಬಳೆ) ರಸ್ತೆಯ ಪಳ್ಳಕಾನ ಎಂಬಲ್ಲಿ ಇಂದು ಬೆಳಿಗ್ಗೆ ಉಂಟಾದ ರಸ್ತೆ ಅಪಘಾತದಲ್ಲಿ ಕಾರು ಮತ್ತು ಬುಲ್ಲೆಟ್ ಬೈಕ್ ಪರಸ್ಪರ ಡಿಕ್ಕಿಯಾಗಿ ಬೈಕ್ ಸವಾರ ಮಣಿಯಂಪಾರೆಯ ಮಿಥುನ್ ರಾಜ್ ಎಂಬಾತನನ್ನು ಗಂಭೀರ ಗಾಯಗಳೊಂದಿಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಿಗ್ಗೆ 7.45ರ ಸುಮಾರಿಗೆ ಅಪಘಾತ ನಡೆದಿದ್ದು ತೀವ್ರ ಗಾಯಗೊಂಡ ಇವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯಲಾಯಿತು. ವಾಹನ ಚಾಲಕರಾದ ಇವರು ಬೈಕಿನಲ್ಲಿ ಕೆಲಸಕ್ಕೆ ತೆರಳುತ್ತಿರುವ ವೇಳೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆ ಮದ್ಯೆ ತಿರುಗಿ ನಿಂತಿದ್ದು ಬೈಕ್ ಸವಾರ ಐವತ್ತು ಮೀಟರ್ ದೂರಕ್ಕೆ ಚರಂಡಿಗೆ ಎಸೆಯಲ್ಪಟ್ಟಿದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

0 Comments