ಬದಿಯಡ್ಕ : ಸಂಗೀತ, ಭರತನಾಟ್ಯ ಹಾಗೂ ಜಾನಪದ ನೃತ್ಯಗಳ ತರಗತಿಗಳಿಗಾಗಿ 'ಶಿವಾರ್ಪಣಂ ಕಲಾನಿಕೇತನ' ಉದ್ಘಾಟನೆ ನೀರ್ಚಾಲು ಉತ್ತಮ ಕಾಂಪ್ಲೆಕ್ಸ್ನಲ್ಲಿ ಮಂಗಳವಾರ ಜರಗಿತು. ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ವಿದುಷಿ ಅಶ್ವಿನಿ ಕೆ.ಎಂ., ವಿದುಷಿ ವಿಷಯಾ ಬಾಲಕೃಷ್ಣನ್, ವಿದುಷಿ ಮೀನಾಕ್ಷಿ ಎಸ್. ಭಟ್ ಇವರ ನೇತೃತ್ವದಲ್ಲಿ ತರಗತಿಗಳನ್ನು ಆರಂಭಿಸಲಾಯಿತು. ಜ್ಯೋತಿಷಿ ಗೀತಾ ಎಂ. ಭಟ್ ಮೊಳೆಯಾರು, ಸಂಗೀತ ವಿದುಷಿ ಸರಸ್ವತಿ ಕೃಷ್ಣನ್ ಬೇಳ, ಗೀತಾ ಬಾಲಕೃಷ್ಣನ್ ಜೊತೆಯಾಗಿ ದೀಪಬೆಳಗಿಸಿ ಉದ್ಘಾಟಿಸಿದರು.
ಡಾ| ಪುರುಷೋತ್ತಮ ಭಟ್, ಗಣೇಶ ಕೃಷ್ಣ ಅಳಕ್ಕೆ, ಬಾಲಸುಬ್ರಹ್ಮಣ್ಯ ಮಲ್ಲಡ್ಕ, ಹರಿಪ್ರಸಾದ ಮಲ್ಲಡ್ಕ, ಶ್ಯಾಮಕುಮಾರ ಕೆ.ಎಂ., ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯರುಗಳಾದ ಹರೀಶ ಎ., ಶ್ಯಾಮಪ್ರಸಾದ ಸರಳಿ ಉದ್ಘಾಟನಾ ಸಂದರ್ಭ ಉಪಸ್ಥಿತರಿದ್ದರು. ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಡಿ.ಶಂಕರ, ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಬ್ಲೋಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕ್ಕುಂಜ, ಗ್ರಾಮಪಂಚಾಯಿತಿ ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ರಜನಿ ಸಂದೀಪ್, ಅವಿನಾಶ್ ರೈ ಬದಿಯಡ್ಕ, ಹಿರಿಯ ಸದಸ್ಯ ಬಾಲಕೃಷ್ಣ ಶೆಟ್ಟಿ ಕೆ., ಬಿಜೆಪಿ ಪಂಚಾಯಿತಿ ಸಮಿತಿ ಅಧ್ಯಕ್ಷ ಉದನೇಶ್ವರ ಬದಿಯಡ್ಕ, ನೃತ್ಯ ಗುರುಗಳಾದ ವಿದುಷಿ ಡಾ| ವಿದ್ಯಾಲಕ್ಷ್ಮಿ ಕುಂಬಳೆ ದಂಪತಿಗಳು ಪಾಲ್ಗೊಂಡು ಶುಭಹಾರೈಸಿದರು.

0 Comments