Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬದಿಯಡ್ಕದಲ್ಲಿ ವಾಹನ ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ : ಇಬ್ಬರ ಮೇಲೆ ಹಲ್ಲೆ ಆರೋಪ; ಐವರ ವಿರುದ್ಧ ಪ್ರಕರಣ ದಾಖಲು

ಬದಿಯಡ್ಕ : ವಾಹನ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ತಕರಾರು ಹಲ್ಲೆ ಆರೋಪಕ್ಕೆ ತಿರುಗಿದ್ದು, ಇಬ್ಬರು ನೀಡಿದ ಪ್ರತ್ಯೇಕ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬೀಜಂತಡ್ಕ ಕಾವಿಲಮ್ಮ ನಿವಾಸಿ ಬಿ. ಗಿರೀಶ್ (41) ನೀಡಿದ ದೂರಿನ ಪ್ರಕಾರ, ಬದಿಯಡ್ಕ ಪೇಟೆಯಲ್ಲಿ ಸ್ಕೂಟರ್ ನಿಲ್ಲಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ವಿದ್ಯಾಗಿರಿ ನಿವಾಸಿಗಳಾದ ಅಬ್ದುಲ್ಲ, ಅಸ್ಖರ್, ಅನನ್ಶ ಮತ್ತು ಜುನೈದ್ ಎಂಬವರು ಸ್ಥಳಕ್ಕೆ ಬಂದು ತನ್ನನ್ನು ತಡೆದು ಕೈಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಕೆಳಕ್ಕೆ ತಳ್ಳಿ ನೆಲದಲ್ಲಿ ಎಳೆದುಕೊಂಡು ಹೋಗಿ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದೇ ಘಟನೆಗೆ ಸಂಬಂಧಿಸಿದಂತೆ ವಿದ್ಯಾಗಿರಿ ನಿವಾಸಿ ಅಬ್ದುಲ್ಲ ಕುಂಞಿ (60) ಅವರು ನೀಡಿದ ದೂರಿನಲ್ಲಿಯೂ ಗಿರೀಶ್ ವಿರುದ್ಧ ಪ್ರಕರಣ ದಾಖಲಾಗಿದೆ. ವಾಹನ ಪಾರ್ಕಿಂಗ್ ವಿಚಾರದಲ್ಲಿ ಗಿರೀಶ್ ಜತೆ ವಾಗ್ವಾದ ನಡೆದಿದ್ದು, ಈ ವೇಳೆ ಗಿರೀಶ್ ಮುಖಕ್ಕೆ ಕೈಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಘಟನೆ ಅಕ್ಟೋಬರ್ 17ರಂದು ಸಂಜೆ ನಡೆದಿದ್ದು, ಇಬ್ಬರೂ ಅಕ್ಟೋಬರ್ 21ರಂದು ಪೊಲೀಸ್ ಠಾಣೆಗೆ ತೆರಳಿ ಪ್ರತ್ಯೇಕ ದೂರು ನೀಡಿದ್ದಾರೆ. ಎರಡೂ ದೂರುಗಳ ಆಧಾರದಲ್ಲಿ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement