ಬದಿಯಡ್ಕ : ಬಸ್ ನಿಲ್ದಾಣದ ಹಿಂಭಾಗದ ಸನ ಕಾಂಪ್ಲೆಕ್ಸ್‌ನಲ್ಲಿ, ನೂತನವಾಗಿ 'ಡಾ. ಮಾಲಿನಿ ಸರಳಾಯ ಮೆಮೋರಿಯಲ್ ಶ್ರೀನಿಧಿ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್' ಕಾರ್ಯಾರಂಭಗೊಂಡಿದೆ. ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕ್ಲಿನಿಕ್ ಉದ್ಘಾಟಿಸಿದರು.
ಸಮಾರಂಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಶಂಕರ ಡಿ., ಉಪಾಧ್ಯಕ್ಷೆ ಅಶ್ವಿನಿ, ಕಾಸರಗೋಡು ಬ್ಲಾಕ್ ಪಂಚಾಯತ್ ಶಿಕ್ಷಣ–ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ಮೊಯ್ದು, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ರಾಮಪ್ಪ ಮಂಜೇಶ್ವರ, ಬದಿಯಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಸಂದೀಪ್, ಶಿಕ್ಷಣ-ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಮಹೇಶ್ ವಳಕುಂಜ, ಗ್ರಾಮ ಪಂಚಾಯತ್ ಸದಸ್ಯರಾದ ಮಾಹಿನ್ ಕೇಳೋಟ್, ಬಾಲಕೃಷ್ಣ ಶೆಟ್ಟಿ ಹಾಗೂ ಶ್ಯಾಮ ಪ್ರಸಾದ್ ಮಾನ್ಯ, ಶ್ಯಾಮ್ ಪ್ರಸಾದ್ ಸರಳಿ, ಧಾರ್ಮಿಕ ಮುಂದಾಳು, ಉದ್ಯಮಿ ಮಧುಸೂಧನ್ ಆಯರ್, ಆನಂದ ಕೆ.ಮವ್ವಾರು, ನ್ಯಾಯವಾದಿ ವೆಂಕಟ್ರಮಣ ಭಟ್ ಚಂಬಲ್ತಿಮಾರ್, ವ್ಯಾಪಾರಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕುಂಜಾರ್ ಮುಹಮ್ಮದ್ ಹಾಜಿ, ಬದಿಯಡ್ಕ ಘಟಕದ ಅಧ್ಯಕ್ಷ ನರೇಂದ್ರ ಬಿ.ಎನ್., ಕೇಶವ ಪಾಟಾಳಿ, ಶಿವಳ್ಳಿ ಬ್ರಾಹ್ಮಣ ಸಮಾಜದ ಅಧ್ಯಕ್ಷೆ ಸೀತಾರತ್ನ ಪುಣಿಂಚಿತ್ತಾಯ, ಬಿಜೆಪಿ ಮುಖಂಡ ಉದನೇಶ್ವರ ಬದಿಯಡ್ಕ, ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ನೂತನ ಕ್ಲಿನಿಕ್‌ನಲ್ಲಿ ಕಿವಿ, ಮೂಗು, ಗಂಟಲು (ಇ.ಎನ್.ಟಿ.), ಸಾಮಾನ್ಯ ವೈದ್ಯಕೀಯ, ಎಲುಬು ಮತ್ತು ಕೀಲು, ಮಧುಮೇಹ ಹಾಗೂ ಮೂತ್ರಪಿಂಡ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ಸೇರಿದಂತೆ ವಿವಿಧ ವಿಭಾಗಗಳ ನುರಿತ ತಜ್ಞ ವೈದ್ಯರ ಸೇವೆ ಲಭ್ಯವಿರಲಿದೆ. ಇದರಿಂದ ಬದಿಯಡ್ಕ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಒಂದೇ ಸೂರಿನಡಿ ವಿವಿಧ ವೈದ್ಯಕೀಯ ಸೇವೆಗಳನ್ನು ಪಡೆಯಲು ಅನುಕೂಲವಾಗುವಂತೆ ಕಾರ್ಯ ಪ್ರವೃತ್ತಿ ಆರಂಭಿಸಲಾಗಿದೆ.

.jpeg)
0 Comments