Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕೇರಳ ರಾಜ್ಯೋತ್ಸವ ಆಚರಣೆ: ಸಾಹಿತಿ ಹಾಗೂ ಕಲಾವಿದರಿಗೆ ಜಿಲ್ಲಾಡಳಿತದಿಂದ ಗೌರವಾರ್ಪಣೆ

ಕಾಸರಗೋಡು: ಭಾಷಾ ವೈವಿಧ್ಯತೆಯ ನಾಡು ಕೇರಳದ 70ನೇ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1ರಂದು ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜಿಲ್ಲಾ ಮಟ್ಟದ ಆಚರಣೆ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲೆಯ ಸಾಹಿತಿಗಳು ಹಾಗೂ ಕಲಾವಿದರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ಮಾಹಿತಿ ಕಚೇರಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸಾಕ್ಷರತಾ ಮಿಷನ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಶ್ರೀಧನ್ಯ ಸುರೇಶ್ ಕೇರಳ ರಾಜ್ಯೋತ್ಸವದ ಸಂದೇಶ ನೀಡಿದರು. ಕಾಸರಗೋಡು ನಗರಸಭೆ ಅಧ್ಯಕ್ಷೆ ಶಾಹಿನಾ ಸಲೀಂ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ಅಂಬಿಕಾಸುತನ್ ಮಾಂಗಾಡ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಪ್ರಮುಖ ಸಾಹಿತಿ ಹಾಗೂ ದೃಶ್ಯಮಾಧ್ಯಮ ಪತ್ರಕರ್ತ ನಾಲಪ್ಪಾಡಂ ಪದ್ಮನಾಭನ್, ಖ್ಯಾತ ಚಿತ್ರಕಾರ ಪಿ.ಎಸ್. ಪುಣಿಂಚಿತ್ತಾಯ ಅವರನ್ನು ಜಿಲ್ಲಾಡಳಿತ ಸನ್ಮಾನಿಸಿತು. ಯಕ್ಷಗಾನ ಗೊಂಬೆಯಾಟ ಕಲಾವಿದ ಕೆ.ವಿ. ರಮೇಶ್ ಹಾಗೂ ಖ್ಯಾತ ತೆಯ್ಯಂ ಕಲಾವಿದ ಮುಕುಂದನ್ ಇಳಂಕುಟ್ಟಿ ಪೆರುಮಲಯನ್ ಅವರನ್ನೂ ಗೌರವಿಸಲಾಯಿತು.

ಹುಜೂರ್ ಶಿರಸ್ತದಾರ್ ಪಿ. ನಿಸಾಮುದ್ದೀನ್ ಭಾಷಾ ಪ್ರತಿಜ್ಞೆ ಬೋಧಿಸಿದರು. ಹಿರಿಯ ಪತ್ರಕರ್ತ ವಿ.ವಿ. ಪ್ರಭಾಕರನ್, ರಾಧಾಕೃಷ್ಣ ಉಳಿಯತ್ತಡ್ಕ, ಜಿಲ್ಲಾ ಸಾಕ್ಷರತಾ ಮಿಷನ್ ಸಂಯೋಜಕ ಕೆ.ವಿ. ರತೀಶ್ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕಾರ್ಯದರ್ಶಿ ಟಿ.ಎಂ.ಎ. ಕರೀಂ ಮಾತನಾಡಿದರು.

ಜಿಲ್ಲಾ ಮಾಹಿತಿ ಕಚೇರಿಯ ಸಹಾಯಕ ಸಂಪಾದಕಿ ಎ.ಪಿ. ದಿಲ್ನಾ ಹಾಗೂ ಸತ್ಯನಾರಾಯಣ ತಂತ್ರಿ ಸನ್ಮಾನಿತರನ್ನು ಪರಿಚಯಿಸಿದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಸ್ವಾಗತಿಸಿ, ಸಹಾಯಕ ಮಾಹಿತಿ ಅಧಿಕಾರಿ ಎ.ಪಿ. ನೌಶಾದ್ ವಂದಿಸಿದರು.

Post a Comment

0 Comments

ಜಾಹೀರಾತು

Responsive Advertisement