ಕಾಸರಗೋಡು: ಕಾವುಗೋಳಿ ಚೌಕಿ ಕಿಯಕ್ಕೇವೀಡು ಶ್ರೀ ವಿಷ್ಣುಮೂರ್ತಿ ವಯನಾಟ್ಟು ಕುಲವನ್ ತರವಾಡಿನಲ್ಲಿ ದೈವಂಕಟ್ಟು ಮಹೋತ್ಸವ ಎಪ್ರಿಲ್ 17,18,19,20 ಎಂಬೀ ದಿನಗಳಲ್ಲಿ ಜರಗಲಿರುವುದು. ಕಾರ್ಯಕ್ರಮದ ಅಂಗವಾಗಿ ಉಗ್ರಾಣ ಮುಹೂರ್ತ ಇಂದು (ಗುರುವಾರ) ಬೆಳಗ್ಗೆ ನಡೆಯಿತು. ಅನಂತರ ಎರಿಯಾ ಕೋಟ ಶ್ರೀ ಭಗವತೀ ಕ್ಷೇತ್ರದಿಂದ ಹಸಿರುವಾಣಿ ಮೆರವಣಿಗೆ ನಡೆಯಿತು. ಆಚಾರ ಸ್ಥಾನಿಕರು, ವಿವಿದ ಸಮಿತಿ ಪದಾಧಿಕಾರಿಗಳು, ಮಹಿಳೆಯರು, ಮಕ್ಕಳು ಸಹಿತ ನೂರಾರು ಮಂದಿ ಭಾಗವಹಿಸಿದರು.
ನಾಳೆ (ಶುಕ್ರವಾರ) ಪ್ರಾತಃಕಾಲ ಶ್ರೀ ಕೊರತ್ತಿಯಮ್ಮನ ಕೋಲ, ಬೆಳಗ್ಗೆ 4 ಕ್ಕೆ ಕಲ್ಲುರ್ಟಿ ಅಮ್ಮನ ಕೋಲ, 8 ರಿಂದ ಶ್ರೀ ವಿಷ್ಣುಮೂರ್ತಿ ದೈವ ಕೋಲ, 8.30 ಕ್ಕೆ ಪಡಿಞಾರ್ ಚಾಮುಂಡಿ ದೈವ ಕೋಲ, ಗುಳಿಗನ ಕೋಲ, ಸಂಜೆ 6 ಕ್ಕೆ ದೀಪಾರಾಧನೆ, 7 ಕ್ಕೆ ಕೈವೀದ್, ವಯನಾಟ್ಟು ಕುಲವನ್ ತೈಯ್ಯಂ ಕೂಡಲ್, ಎಪ್ರಿಲ್ 19 ಶನಿವಾರ ಸಾಯಂಕಾಲ 3 ರಿಂದ ಕಾರ್ನೋನ್ ತೆಯ್ಯ ವೆಳ್ಳಾಟ, ಕೋರಚ್ಚನ್ ತೆಯ್ಯಂ ವೆಳ್ಳಾಟ, ರಾತ್ರಿ 8 ಕ್ಕೆ ಕಂಡನಾರ್ ಕೇಳನ್ ತೆಯ್ಯಂ ವೆಳ್ಳಾಟ, ಬಪ್ಪಿಡಲ್, ರಾತ್ರಿ 11 ಕ್ಕೆ ಶ್ರೀ ವಿಷ್ಣುಮೂರ್ತಿ ತೆಯ್ಯಂ ಆರಂಭ, 11.30 ಕ್ಕೆ ಶ್ರೀ ವಯನಾಟ್ಟು ಕುಲವನ್ ತೆಯ್ಯಂ ವೆಳ್ಳಾಟ,
ಎಪ್ರಿಲ್ 20 ಆದಿತ್ಯವಾರದಂದು ಬೆಳಗ್ಗೆ 6 ಕ್ಕೆ ಕಾರ್ನೋನ್ ತೆಯ್ಯಂ, 8 ರಿಂದ ಕೋರಚ್ಚನ್ ತೆಯ್ಯಂ, 10 ಕ್ಕೆ ಕಂಡನಾರ್ ಕೇಳನ್ ತೆಯ್ಯಂ, 4.30 ಕ್ಕೆ ಶ್ರೀ ವಯನಾಟ್ಟು ಕುಲವನ್ ತೆಯ್ಯಂ, ಚೂಟೊಪ್ಪಿಕಲ್, 6 ರಿಂದ ಶ್ರೀ ವಿಷ್ಣುಮೂರ್ತಿ ತೆಯ್ಯಂ, 11.30 ಕ್ಕೆ ಮರ ಪಿಳರ್ಕಲ್, ಭಂಡಾರ ನಿರ್ಗಮನ, ಕೈವೀದ್, ಅನ್ನಪ್ರಸಾದ ನಡೆಯಲಿದೆ
0 Comments