ಹೃದಯ ಸಂಬಂಧ ಖಾಯಿಲೆ ವಾಸಿಯಾದ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮಹಿಳೆ ಮರುದಿನ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ವೆಸ್ಟ್ ಏಳೇರಿ ಮುಡಂದನ್ ಪಾರ ಮನೋಜ್ ಎಂಬವರ ಪತ್ನಿ ಸ್ವಪ್ನ(35) ಮೃತಪಟ್ಟ ಮಹಿಳೆ. ಈಕೆ ಕಾಞಂಗಾಡ್ ಸ್ಟಾಟಿಸ್ಟಿಕಲ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾಳೆ.
ಸ್ವಪ್ನಳಿಗೆ ಹೃದಯ ಸಂಬಂದ ಖಾಯಿಲೆ ಕಾಣಿಸಿಕೊಂಡಿದ್ದು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಖಾಯಿಲೆ ವಾಸಿಯಾದ ಹಿನ್ನೆಲೆಯಲ್ಲಿ ಮಂಗಳವಾರ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದಳು. ನಿನ್ನೆ (ಬುದವಾರ) ಬೆಳಗ್ಗೆ ಆಕೆಗೆ ಮತ್ತೆ ಎದೆ ನೋವು ಕಾಣಿಸಿಕೊಂಡಿದ್ದು ಕೂಡಲೇ ವೆಳ್ಳರಿಕುಂಡ್ ಆಸ್ಪತ್ರೆಗೂ ಅನಂತರ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೂ ಕೊಂಡೊಯ್ಯಲಾಯಿತು. ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಆಕೆ ಕೊನೆಯುಸಿರೆಳೆದರು. ಮೃತರು ಪತಿ ಮನೋಜ್, ಮಕ್ಕಳಾದ ಸನ್ಮಯ, ಮಾಳವಿಕ ಎಂಬಿವರನ್ನು ಅಗಲಿದ್ದಾರೆ
0 Comments