Ticker

6/recent/ticker-posts

ಕೂಲಿ ಕೆಲಸಕ್ಕೆಂದು ಬೆಳಗ್ಗೆ ಮನೆಯಿಂದ ಹೊರಟ ವ್ಯಕ್ತಿ ಪ್ರಯಾಣಿಕರ ತಂಗುದಾಣದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ


 ಮುಳ್ಳೇರಿಯ:  ಕೆಲಸಕ್ಕೆಂದು  ಬೆಳಗ್ಗೆ 7 ಗಂಟೆಗೆ ಮನೆಯಿಂದ ಹೊರಟ ವ್ಯಕ್ತಿಯ ಮೃತದೇಹ ಪ್ರಯಾಣಿಕರ ತಂಗುದಾಣದಲ್ಲಿ ಪತ್ತೆಯಾಗಿದೆ. ಕಿನ್ನಿಂಗಾರು ಮದಕ ನಿವಾಸಿ ಕುಞ(50) ಮೃತಪಟ್ಟ ವ್ಯಕ್ತಿ. ಇವರು ಕೂಲಿ ಕಾರ್ಮಿಕರಾಗಿದ್ದಾರೆ. ಕೆಲಸಕ್ಕೆ ಹೊಗುವುದಾಗಿ ಹೇಳಿ ಇವರು ಬೆಳಗ್ಗೆ ‌ಮನೆಯಿಂದ ಹೊರಟಿದ್ದರು. 8 ಗಂಟೆಯ ವೇಳೆ  ನೆಟ್ಟಣಿಗೆ ಪ್ರಯಾಣಿಕರ ತಂಗುದಾಣದಲ್ಲಿ ಇವರು ಮಲಗಿದ ಸ್ಥಿತಿಯಲ್ಲಿ ಕಂಡು ಬಂದರೆನ್ನಲಾಗಿದೆ. ಮಾಹಿತಿ ತಿಳಿದು ಮನೆಯವರು ಹಾಗೂ ಸ್ಥಳೀಯರು ಸೇರಿ  ಅಂಬ್ಯುಲೆನ್ಸಿನಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಂದಾಗ ಅವರು ಮೃತಪಟ್ಟಿದ್ದರು. ಹೃದಯಾಘಾತದಿಂದ ಅವರು ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಮೃತರು  ಪತ್ನಿ ಗೀತ, ಮಕ್ಕಳಾದ ಶ್ರೀಕಾಂತ್, ವಂದನ, ಅಶ್ವಿತ,ಕೃತಿಕ ಸಹೋದರ ಕೃಷ್ಣ ಹಾಗೂ ಅಪಾರ ಬಂಧು‌ ಮಿತ್ರರನ್ನು ಅಗಲಿದ್ದಾರೆ.

Post a Comment

0 Comments