Ticker

6/recent/ticker-posts

ಮಾದಕವಸ್ತು ಬೇಟೆಗೆ ಆಗಮಿಸಿದ ಪೊಲೀಸರನ್ನು ಕಂಡು ವಸತಿಗೃಹದಿಂದ ಓಟಕಿತ್ತ‌ಮಲಯಾಳಂ ಚಕನಚಿತ್ರ ನಟ


 ಕೊಚ್ಚಿನ್:  ಮಾದಕವಸ್ತು ಬೇಟೆಗೆ ಆಗಮಿಸಿದ  ಪೊಲೀಸರನ್ನು ಕಂಡು ವಸತಿಗೃಹದಲ್ಲಿ ಬಾಡಿಗೆ ಕೋಣೆಯಲ್ಲಿ ದ್ದ ಚಲನಚಿತ್ರ ನಟ ಹಾಗೂ ಸಂಗಡಿಗರು ಓಟಕಿತ್ತ ಘಟನೆ ನಡೆದಿದೆ. ಮಲಯಾಳಂ ಚಲನಚಿತ್ರ ನಟ ಶೈನ್ ಟೋಂ ಚಾಕೋ ಎರ್ನಾಕುಲಂನಲ್ಲಿ ಹೋಟೆಲೊಂದರಿಂದ ಇಳಿದು ಓಡಿದ ವ್ಯಕ್ತಿ. ಬುದವಾರ ರಾತ್ರಿ 10.58 ರ ವೇಳೆ ಈ ಘಟನೆ ನಡೆದಿದೆ. ಈತನ ಓಟದ ಸಿಸಿ ಕ್ಯಾಮರಾ ವಿಡಿಯೊ ಇದೀಗ ವೈರಲ್ ಆಗಿದೆ.

  ವಸತಿಗೃಹದಲ್ಲಿ ಮಾದಕವಸ್ತು ಬಳಕೆ ನಡೆಯುತ್ತಿದೆ ಎಂಬ ವರದಿ ಪೊಲೀಸರಿಗೆ ಲಭಿಸಿತ್ತು. ಅದರಂತೆ ಪೊಲೀಸರು ಆಗಮಿಸಿದಾಗ ಶೈನ್ ಹಾಗೂ ಸಂಗಡಿಗರು ಓಡಿ ಪರಾರಿಯಾದರು. ಶೈನ್ ಮಾದಕವಸ್ತು ಬಳಸುವ ವ್ಯಕ್ತಿ ಎಂದು ಈ ಹಿಂದೆಯೇ ದೂರುಂಟಾಗಿತ್ತು.

Post a Comment

0 Comments