Ticker

6/recent/ticker-posts

ಸ್ವರಸಿಂಚನ ಸಂಗೀತ ಶಾಲೆಯ ಶಿಕ್ಷಕಿ ಸವಿತಾ ಕೋಡಂದೂರು ಮುಡಿಗೇರಿದ "ಸರಸ್ವತಿ ಸಾಧಕ ಸಿರಿ ರಾಷ್ಟ್ರಪ್ರಶಸ್ತಿ"ಯ ಗರಿ


ಅಡ್ಯನಡ್ಕ: ನೂರಾರು ವಿದ್ಯಾರ್ಥಿಗಳಿಗೆ ಸಂಗೀತಾಭ್ಯಾಸವನ್ನು ಮಾಡಿಸುತ್ತಿರುವ ವಿಟ್ಲ ಸ್ವರಸಿಂಚನ ಸಂಗೀತಶಾಲೆಯ ಗುರುಗಳಾದ ಸವಿತಾ ಕೋಡಂದೂರು ಅವರಿಗೆ ಸರಸ್ವತಿ ಸಾಧಕ ಸಿರಿ ರಾಷ್ಟ್ರಪ್ರಶಸ್ತಿ 2025 ಪ್ರದಾನ ಮಾಡಲಾಯಿತು.

ದಾವಣಗೆರೆ ಗಡಿಯಾರ ಕಂಬದ ಬಳಿಯ ಚನ್ನಗಿರಿ ವಿರೂಪಾಕ್ಷ ಕಲ್ಯಾಣಮಂಟಪದಲ್ಲಿ ಜರಗಿದ ಬೆಂಗಳೂರು  ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ 70ನೇ ವರ್ಷದ ಕನ್ನಡ ನಿತ್ಯೋತ್ಸವ ಪ್ರಯುಕ್ತ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ಡಾ. ನಾಗರಾಜ ಬೈರಿ ಮಾತನಾಡಿ ಸಾಧನೆ ಮಾಡುವುದು ಸುಲಭ ಸಾಧ್ಯವಿಲ್ಲ. ಕಠಿಣ ಪರಿಶ್ರಮ, ತಾಳ್ಮೆ ಇದ್ದವರಿಗೆ ಮಾತ್ರ ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ. ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿರುವುದು ಪುಣ್ಯದ ಕೆಲಸವಾಗಿದೆ. ನಿತ್ಯ ದೇವರ ನಾಮಸ್ಮರಣೆಯನ್ನು ಮಾಡುವುದರಿಂದ ಪರಿಸರವೂ ಪರಿಶುದ್ಧವಾಗುತ್ತದೆ ಎಂದರು. ವಿವಿಧ ಕ್ಷೇತ್ರಗಳ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Post a Comment

0 Comments