Ticker

6/recent/ticker-posts

ಕೆ.ಐ.ಸಿ ಯು-ಎ-ಇ ಸಮಿತಿ ವತಿಯಿಂದ ಕರ್ನಾಟಕ ಸರಕಾರದ ಗಡಿ ಪ್ರದೇಶ ಅಧ್ಯಕ್ಷರು ನಿರ್ದೇಶಕರಿಗೆ ಸನ್ಮಾನ


 ದುಬೈ : ಖಾಸಗಿ ಕಾರ್ಯಕ್ರಮಗಳ ನಿಮಿತ್ತ ಯು ಎ ಇ ಪ್ರವಾಸದಲ್ಲಿರುವ ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರ,  ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕರ್ನಾಟಕ ಸರಕಾರದ ಗೌರವಾನ್ವಿತ ಸದಸ್ಯರಾದ  ಡಾ.ಸಂಜೀವ್ ಕುಮಾರ್ ಅತಿವಾಲೆ,ಶಿವರೆಡ್ಡಿ ಖ್ಯಾಡೆದ್, ರವರಿಗೆ ಕರ್ನಾಟಕ ಕಲ್ಚರಲ್ ಸೆಂಟರ್ , ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯು ಎ ಇ ಸಮಿತಿ   ವತಿಯಿಂದ ಸನ್ಮಾನ ಕಾರ್ಯಕ್ರಮವು ಇತ್ತೀಚೆಗೆ ಕೆ ಎಂ ಸಿ ಸಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ   ಗಡಿನಾಡ  ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕೇಂದ್ರ ಸಮಿತಿಯ ಕೋಶಾಧಿಕಾರಿ ಝಡ್ ಎ ಕಯ್ಯಾರ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕ ಕೋಶಾಧಿಕಾರಿ ಅಶ್ರಫ್ ಪಿ.ಪಿ ಬಾಯರ್ ರವರು ಮುಖ್ಯಅಥಿತಿಗಳಾಗಿ ಭಾಗವಹಿಸಿದರು.


ಕಾರ್ಯಕ್ರಮದಲ್ಲಿ ಕರ್ನಾಟಕ ಇಸ್ಲಾಮಿಕ್  ಸೆಂಟರ್  ಯು ಎ ಇ ಸಮಿತಿ ಅಧ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ ರವರು ಉದ್ಘಾಟಿಸಿ ಮಾತನಾಡಿ , ಕೆ ಐ ಸಿ ಆಕಾಡೆಮಿ ನಡೆಸಿಕೊಂಡು ಬರುತ್ತಿರುವ ಶೈಕ್ಷಣಿಕ ಕ್ರಾಂತಿ, ವಿದ್ಯಾಭ್ಯಾಸ ಕ್ಕೆ ನೀಡುತ್ತಿರುವ ಮುತುವರ್ಜಿ , ಹಾಗು ಅಕಾಡೆಮಿ ವಿವರಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ಅಥಿತಿಗಳಿಗೆ ಸಂಸ್ಥೆಯ ಕುರಿತು ವಿವರಿಸಿದರು .ಕಾರ್ಯಕ್ರಮದಲ್ಲಿ  ಸ್ವಾಗತ ಭಾಷಣವನ್ನು ನೆರವೇರಿಸಿದ ಕೆ ಐ ಸಿ ಜಿ ಸಿ ಸಿ ಅಧ್ಯಕ್ಷರು, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಗಲ್ಫ್ ರಾಷ್ಟ್ರಗಳ ಸಲಹಾ ಸಮಿತಿಯ ಅಧ್ಯಕ್ಷರಾಗದ  ಅಶ್ರಫ್ ಶಾ ಮಂತೂರು, ರವರು ಅಥಿತಿಗಳನ್ನು ಪರಿಚಯಿಸಿ ಸಭೆಗೆ ಸ್ವಾಗತಿಸಿ, ಕೆ ಐ ಸಿ  ಸಂಸ್ಥೆಯು ಹಲವಾರು ವರ್ಷಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿದ್ದು  ಕನ್ನಡ ನೆಲ-ಜಲಧ  ಮೇಲೆ ಅತೀವ ಗೌರವವನ್ನು ಹೊಂದಿದ್ದು , ಸಂಸ್ಥೆಯಲ್ಲಿ ಇದೀಗ ಹಲವಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಗೈದು ಇಂದು ಸಾಮಾಜಿಕ ಧಾರ್ಮಿಕ ಕ್ಷೇತ್ರಗಲ್ಲಿ ಗುರುತಿಸಿಕೊಂಡಿದ್ದು , ಸಂಸ್ಥೆಯ ವಿದ್ಯಾರ್ಥಿಗಳು ಇಂದು ಕನ್ನಡದ ಪ್ರಭಾಷಣ ವೇದಿಕೆಗಳಲ್ಲಿ ಗುರುತಿಸಿಕೊಂಡಿದ್ದು, ಅಲ್ಲದೆ ನಮ್ಮ ಸಂಸ್ಥೆಯಲ್ಲಿ  ವಿದ್ಯಾರ್ಥಿ ಯೋರ್ವರು ಇಂದು ಕರ್ನಾಟಕ ಸರಕಾರದ ರಾಜ್ಯ ವಕ್ಫ್ ಬೋರ್ಡ್ ಸಲಹಾ ಸಮಿತಿಗಳಲ್ಲಿಯೂ ನಾಮ ನಿರ್ದೇಶನಗೊಂಡಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದ್ದು, ಗಡಿನಾಡ ಪ್ರದೇಶ ಕನ್ನಡ ನೆಲದ ಅಭಿವೃದ್ದಿಗಾಗಿ ತಾವು ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮ, ತಮ್ಮ ಕೆಲಸ ಕಾರ್ಯಗಳ ಕುರಿತು ಅಭಿಮಾನವಿದ್ದು , ಮುಂದೆಯೂ ತಮ್ಮ ನೇತೃತ್ವದಲ್ಲಿ ಹಲವಾರು ಕ್ರಿಯಾ ಯೋಜನೆಗಳು ಮುಂದುವರಿಯಲಿ ಎಂದು ಶುಭಹಾರೈಸಿದರು.


ನಂತರ ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರ,  ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕರ್ನಾಟಕ ಸರಕಾರದ ಗೌರವಾನ್ವಿತ ಸದಸ್ಯರಾದ  ಡಾ.ಸಂಜೀವ್ ಕುಮಾರ್ ಅತಿವಾಲೆ,ಶಿವರೆಡ್ಡಿ ಖ್ಯಾಡೆದ್, ರವರಿಗೆ ಕೆ ಐ ಸಿ ವತಿಯಿಂದ ಸನ್ಮಾನ ಕಾರ್ಯಕ್ರಮವು ನಡೆಯಿತು.

ಇದೆ ಸಂಧರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ  ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರ ರವರು ಮಾತನಾಡುತ್ತಾ  ಗಲ್ಫ್ ರಾಷ್ಟ್ರಗಳಲ್ಲಿ ಬಂದು ಸನ್ಮಾನ ಸ್ವೀಕರಿಸುವುದೆಂದರೆ ಅದೊಂದು ಬಹು ದೊಡ್ಡ ಅಭಿಮಾನವೇ ಸರಿ. ತಮ್ಮ ತಮ್ಮ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ತಮ್ಮೆಲ್ಲವನ್ನು ಬಿಟ್ಟು ಬಂದು ಇಲ್ಲಿನ ಕಷ್ಟ ಕಾರ್ಪಣ್ಯಗಳನ್ನು ಸಂತೋಷದಿಂದ ಅರಗಿಸಿಕೊಂಡು , ಇಂದು ನಮ್ಮಂತಹವರನ್ನು ಗುರುತಿಸಿಕೊಂಡು ಸನ್ಮಾನಿಸಿರುವುದು ಅತೀವ ಸಂತೋಷವನ್ನು ಉಂಟುಮಾಡಿದ್ದು , ತಮ್ಮ ಸಂಸ್ಥೆಯ ಕುರಿತು ತಿಳಿದು ತಮ್ಮನ್ನು ಗಡಿ ನಾಡ ಪ್ರಾಧಿಕಾರದ ವತಿಯಿಂದ ಅಭಿನಂದಿಸುವುದಾಗಿ ತಿಳಿಸಿದರು.ಅಲ್ಲದೆ ಪ್ರಸಕ್ತ ಕರ್ನಾಟಕ ಸರಕಾರವು ರಾಜ್ಯದ ಜನತೆಗೆ ಬಹುದೊಡ್ಡ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು , ಶಿಕ್ಷಣಕ್ಕೆ ಬಹಳಷ್ಟು ಒತ್ತು ನೀಡಿದೆ. ಯುವ ಜನತೆ ಉತ್ತಮ ಶಿಕ್ಷಣದೊಂದಿಗೆ ಉದ್ಯೋಗ ಉದ್ಯಮಗಳನ್ನು ಮುನ್ನಡೆಸಿ ರಾಜ್ಯದ ಸಂಪತ್ತನ್ನು ಅಭಿವೃದ್ಧಿ ಗೊಳಿಸಲು ಪಣತೊಟ್ಟಿದೆ ಎನ್ನುತ್ತಾ   ಮುಂದೆ ನಮ್ಮ ಪ್ರಾಧಿಕಾರದ ವತಿಯಿಂದ ಲಭಿಸುವ ಸವಲತ್ತುಗಳ ಕುರಿತು ವಿವರಿಸಿದ ಅವರು ಶೈಕ್ಷಣಿಕವಾಗಿ ಗಡಿ ಪ್ರದೇಶದ ವಿದ್ಯಾರ್ಥಿಗಳು ಮುಂದೆ ಬರಬೇಕಾಗಿದ್ದು ಉತ್ತಮ ಶಿಕ್ಷಣವನ್ನು ನೀಡಬೇಕಾದ ಜವಾಬ್ದಾರಿ ತಮ್ಮೆಲ್ಲರ ಮೇಲಿದ್ದು , ಸೂಕ್ತ ಸವಲತ್ತುಗಳನ್ನು ಬಳಸಿಕೊಂಡು   ಉತ್ತಮ ಸುಶಿಕ್ಷಿತ ಸಮಾಜವನ್ನು ನಿರ್ಮಿಸಲು ಕೈಜೋಡಿಸಿಕೊಳ್ಳುವಂತೆ ಕೇಳಿಕೊಂಡು ಸಮಿತಿ ಸದಸ್ಯರಿಗೆ ಅಭಿನಂದನೆಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆ ಐ ಸಿ ಯು ಎ ಸಮಿತಿ ಪಧಾಧಿಕಾರಿಗಳು , ಹಿತೈಷಿಗಳು ನೇತಾರರು ಉಪಸ್ಥಿತರಿದ್ದು ವಿವಿದ ರೀತಿಯಲ್ಲಿ ಸಹಕರಿಸಿದರು.

Post a Comment

0 Comments