Ticker

6/recent/ticker-posts

ಗೆಳೆಯರ ಸವಾಲು ಸ್ವೀಕರಿಸಿ ಹಣದಾಸೆಗೆ ಐದು ಬಾಟಲಿ ಮದ್ತ ನೀರು ಬೆರೆಸದೆ ಕುಡಿದ ಯುವಕ ಮೃತ್ಯು


 ಮಂಗಳೂರು: ಹಣದಾಸೆಗಾಗಿ ಗೆಳೆಯರ ಸವಾಲು ಸ್ವೀಕರಿಸಿ ಐದು ಬಾಟಲಿ ಮದ್ಯ ನೀರು ಬೆರೆಸದೆ ಕುಡಿದ ಯುವಕ ಮೃತಪಟ್ಟ ಘಟನೆ ‌ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ಪೂಜಾರಹಳ್ಳಿ ನಿವಾಸಿ ಕಾರ್ತಿಕ್(22) ಮೃತಪಟ್ಟ ಯುವಕ. ಈತನ ಮನೆಯ ಬಳಿ ಈ ಘಟನೆ ನಡೆದಿದೆ.

    ಗೆಳೆಯರಾದ ವೆಂಕಟರೆಡ್ಡಿ, ಸುಬ್ರಮಣಿ ಎಂಬಿವರು ಸವಾಲು ಹಾಕಿದ್ದವರು. ನೀರು ಬೆರೆಸದೆ 5 ಬಾಟಲಿ ಮದ್ಯ ಕುಡಿದರೆ 10 ಸಾವಿರ ರೂ.ಕೊಡುವುದಾಗಿ ಗೆಳೆಯರು ಹೇಳಿದ್ದರು. ಸವಾಲು ಸ್ವೀಕರಿಸಿದ ಕಾರ್ತಿಕ್, 5 ಬಾಟಲಿ ಮದ್ಯ ಕುಡಿದು ಮುಗಿಸಿದನೆನ್ನಲಾಗಿದೆ. ಮದ್ಯ ಕುಡಿದ ಕೂಡಲೇ ಅರೆ ಪ್ರಜ್ಞಾವಸ್ಥೆಯಲ್ಲಾದ ಕಾರ್ತಿಕ್ ನನ್ನು ಗೆಳೆಯರು ಸೇರಿ ಆಸ್ಪತ್ರೆಗೆ ಕೊಂಡೊಯ್ದರೂ ಪ್ರಾಣ ಉಳಿಸಲಾಗಲಿಲ್ಲ. ಕಾರ್ತಿಕ್ ನ ಮನೆಯವರು ಇದೀಗ ಪೊಲೀಸರಿಗೆ ದೂರು ನೀಡಿ ವೆಂಕಟರೆಡ್ಡಿ ಹಾಗೂ ಸುಬ್ರಮಣಿ ವಿರುದ್ದ ಕೇಸು ದಾಖಲಿಸುವಂತೆ ಒತ್ತಾಯಿಸಿದ್ದಾರೆ.  ಕಾರ್ತಿಕ್ ಒಂದು ವರ್ಷದ ಹಿಂದೆಯಷ್ಟೆ ವಿವಾಹಿತನಾಗಿದ್ದು 8 ದಿನಗಳ ಹಿಂದೆ ಆತನ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು

Post a Comment

0 Comments