ಮಾಣಿಲ : ವಿಷ್ಣುಮೂರ್ತಿ ಗೆಳೆಯರ ಬಳಗ ಮಾಣಿಲ ಇದರ 11ನೇ ವರ್ಷದ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಇದರ ಅಂಗವಾಗಿ ನಡೆದ ಶ್ರೀ ಸತ್ಯನಾರಾಯಣ ಪೂಜೆ ಪೂಜೆಯ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಶ್ರೀಧರ ಬಾಳೆಕಲ್ಲು ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ಅನಂತ ರಾಜ್ ಭಟ್ ಮೂ ಜೂರು ಧಾರ್ಮಿಕ ಸಂದೇಶ ನೀಡಿದರು. ವಿಷ್ಣುಮೂರ್ತಿ ಗೆಳೆಯರ ಬಳಗದ ಅಧ್ಯಕ್ಷರಾದ ಶೈಲೇಶ್ ಕುಮಾರ್ ಮುರುವ,ನಡುಮನೆ ಮಹಾಬಲ ಭಟ್ ಮು ರುವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿವೃತ್ತ ಮುಖ್ಯ ಶಿಕ್ಷಕರು ರಾಮಕುಲಾಲ್ ಸಾಯ , ಅಂಚೆ ಸೇವೆ ಮತ್ತು ದೈವದ ಚಾಕ್ರಿದಾರರಾದ ಧೂಮಣ್ಣ ಮಾಣಿಲ , ಹಿರಿಯ ಅಡುಗೆ ಸಹಾಯಕರಾದ ಕೃಷ್ಣಪ್ಪ ಪೂಜಾರಿ ನಾಣಿಲು ,ಆಶಾ ಕಾರ್ಯಕರ್ತೆ ಜಾನಕಿ ಬೇಬಿ, ರತ್ನಾವತಿ ತಾರಿದಳ, ಇವರನ್ನು ಸನ್ಮಾನಿಸಲಾಯಿತು.ಜಯರಾಜ್ ಪ್ರಾರ್ಥನೆಗೈದರು ಮಂಜುಳ ಜ್ಯೋತಿ ವಂದಿಸಿದರು. ಸಂತೋಷ್ ಮೊಂತೇರು ಕಾರ್ಯಕ್ರಮ ನಿರೂಪಿಸಿದರು.
0 Comments