ಹುಚ್ಚು ನಾಯಿ ಕಡಿತಕ್ಕೊಳಗಾಗಿ ರೋಗ ನಿರೋಧಕ ಲಸಿಕೆ ಪಡೆದಿದ್ದ ಐದುವರೆ ವರ್ಷದ ಬಾಲಕಿ ರೋಗ ಉಲ್ಬಣಗೊಂಡು ಮೃತಪಟ್ಟ ಘಟನೆ ನಡೆದಿದೆ. ಮಲಪ್ಪುರಂ ಪೆರುವಳ್ಳೂರು ನಿವಾಸಿ ಸಲ್ಮಾನ್ ಫಾರೀಸ್ ಎಂಬವರ ಪುತ್ರಿ ಸಿಯಾ ಫಾರಿಸ್ ಮೃತಪಟ್ಟ ಬಾಲಕಿ. ಇಂದು ಮುಂಜಾನೆ (ಮಂಗಳವಾರ) 2 ಗಂಟೆಯ ವೇಳೆ ಆಕೆ ಕೋಜಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಕೊನೆಯುಸಿರೆಳೆದಳು.
ಮಾರ್ಚ್ 29 ರಂದು ಬಾಲಕಿ ಮನೆಯ ಬಳಿಯ ಅಂಗಡಿಗೆ ಹೊಇಗಿ ಹಿಂತಿರುಗುತ್ತಿದ್ದಾಗ ಹುಚ್ಚು ನಾಯಿ ಕಚ್ಚಿತ್ತು. ಈಕೆಯ ತಲೆ, ಕಾಲು ಎಂಬೆಡೆಗಳಲ್ಲಿ ಗಂಭೀರ ಗಾಯಗಳಾಗಿತ್ತು. ಈ ವೇಳೆ ಓಡಿ ಬಂದ ಸ್ಥಳೀಯರಾದ ಐದು ಮಂದಿಗೂ ನಾಯಿ ಕಚ್ಚಿತ್ತು. ಅನಂತರ ಬಾಲಕಿ ಸಹಿತ ಎಲ್ಲರಿಗೂ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ನೀಡಲಾಗಿತ್ತು. ಆದರೆ ನಾಲ್ಕು ದಿನಗಳ ಹಿಂದೆ ಬಾಲಕಿಗೆ ಜ್ವರ ಕಾಣಿಸಿಕೊಂಡಿದ್ದು ಕೂಡಲೇ ಕೋಜಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಲಾಯಿತು. ಈ ವೇಳೆ ಬಾಲಕಿಗೆ ಹುಚ್ಚು ನಾಯಿ ರೋಗ ತಗಲಿರುವುದಾಗಿ ಡಾಕ್ಟರುಗಳ ತಪಾಸಣೆಯಿಂದ ತಿಳಿದು ಬಂತು.ಇಂದು ಮುಂಜಾನೆ ಬಾಲಕಿ ಮೃಪಟ್ಡಿದ್ದಾಳೆ. ತಲೆಗೆ ನಾಯಿ ಕಚ್ಚಿದ ಕಾರಣ ರೋಗ ಹರಡಿದೆಯೆಂದು ತಿಳಿದು ಬಂದಿದೆ
0 Comments