Ticker

6/recent/ticker-posts

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶೋಭಾ ಸುರೇಂದ್ರನ್ ಮನೆಗೆ ಬಾಂಬು ಎಸೆತ


 ತ್ತಿಶೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶೋಭಾ ಸುರೇಯ ಅವರ ಮನೆಗೆ ಬಾಂಬು ಎಸೆದ ಘಟನೆ ‌ನಡೆದಿದೆ.‌  ತ್ರಿಶೂರು ಅಯ್ಯಂತೋಳಿಯಲ್ಲಿರುವ ಅವರ ಮನೆಗೆ ಬಾಂಬು ಎಸೆಯಲಾಗಿದೆ. ನಿನ್ನೆ (ಶುಕ್ರವಾರ) ರಾತ್ರಿ ಭಾರೀ ಸ್ಫೋಟದ ಶಬ್ದ ಕೇಳಿದ್ದು ಹೊರಗೆ ಬಂದು ನೋಡಿದಾಗ  ಮನೆಯ ಗೇಟು ದ್ವಂಸಗೊಂಡಿದೆ. ಈ ವೇಳೆ ಶೋಭಾ ಅವರು ಮನೆಯಲ್ಲೇ ಇದ್ದರೆನ್ನಲಾಗಿದೆ. ಎರಡು ಬೈಕುಗಳಲ್ಲಿ ಬಂದ ನಾಲ್ಕು ಮಂದಿ ಬಾಂಬು ಎಸೆದು ಪರಾರಿಯಾದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತನ್ನನ್ನು ಮುಗಿಸಲು ನಡೆಸಿದ ಯತ್ನವಿದು ಎಂದು ಘಟನೆಯ ಬಗ್ಗೆ ಶೋಭಾ ಸುರೇಂದ್ರನ್ ಪ್ರತಿಕ್ರಯಿಸಿದ್ದಾರೆ. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಸಿಟಿ ಜಿಲ್ಲಾ ಅಧ್ಯಕ್ಷ ಜಸ್ಟಿನ್ ಜೇಖಬ್ ಒತ್ತಾಯಿಸಿದ್ದಾರೆ

Post a Comment

0 Comments