Ticker

6/recent/ticker-posts

ಕಾರ್ಯಕರ್ತರಿಂದ ಹಣ ಸಂಗ್ರಹಿಸಿ ಕಾಸರಗೋಡಿನಲ್ಲಿ ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆ: ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಘೋಷಣೆ


 ಕಾಸರಗೋಡು:  ಸಂವಿಧಾನ ಶಿಲ್ಪಿ, ಸಾಮಾಜಿಕ ಪರಿವರ್ತನಾಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರ  ವಿಷಯದಲ್ಲಿ ಎಡ- ಬಲ ರಂಗಗಳು ಅವಗಣನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹಣ ಸಂಗ್ರಹಿಸಿ ಜಿಲ್ಲೆಯಲ್ಲು ಅವರ ಪ್ರತಿಮೆ ಸ್ಥಾಪಿಸುತ್ತೇವೆಯೆಂದು ಪಕ್ಷದ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಹೇಳಿದರು.


 ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿಯ ಅಂಗವಾಗಿ ಬಿಜೆಪಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ನಡೆದ ಸೆಮಿನಾರ್ ಉದ್ಘಾಟಿಸಿ ಅವರು ಈ ರೀತಿ ಹೇಳಿದರು. ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಲು ಹಿಂದೇಟು‌ ಹಾಕಿದ  ಕಾಂಗ್ರೆಸ್ ಇದೀಗ ಅಂಬೇಡ್ಕರ್ ಪ್ರೀತಿ ತೋರಿಸುತ್ತಿದೆ ಎಂದವರು ಹೇಳಿದರು.

  ಪಕ್ಷದ ರಾಜ್ಯ ಕೌನ್ಸಿಲ್ ಸದಸ್ಯ ಬೇಬಿ ಸುಗುಣನ್ ಅವರು ಡಾ.ಬಿ.ಆರ್.ಅಂಬೇಡ್ಕರ್: ಕಾಂಗ್ರೆಸ್ ಸರಕಾರಗಳ ಅವಗಣನೆ, ನರೇಂದ್ರ ಮೋದಿ ಸರಕಾರದ ಗೌರವ ಎಂಬ ವಿಷಯ ಮಂಡಿಸಿದರು. ಜಿಲ್ಲಾ ಉಪಾಧ್ಯಕ್ಷ ಎ.ಕೆ.ಕಯ್ಯಾರ್ ಅಧ್ಯಕ್ಷತೆ ವಹಿಸಿದರು. ಮುಂದಾಳುಗಳಾದ ಮಣಿಕಂಠ ರೈ,  ಎನ್.ಬಾಬು ರಾಜ್, ಪಿ.ಆರ್.ಸುನಿಲ್, ಸಂಜೀವ ಪುಳಿಕೂರ್, ಪುಷ್ಪಾ ಗೋಪಾಲನ್, ಪ್ರಮಿಳಾ ಮಜಲ್, ಅಶ್ವಿನಿ ಕೆ.ಎಂ, ವೀಣಾ ಕುಮಾರಿ, ‌ಗೋಪಾಲಕೃಷ್ಣ ಎಂ, ರಾಮಪ್ಪ ಮಂಜೇಶ್ವರ ಮೊದಲಾದವರು ಮಾತನಾಡಿದರು

Post a Comment

0 Comments