Ticker

6/recent/ticker-posts

ಹಿರಿಯ ಧಾರ್ಮಿಕ ಮುಂದಾಳು, ಕೃಷಿಕ ವಳಮಲೆ ‌ಪದ್ಮನಾಭ ಶೆಟ್ಟಿ ನಿಧನ


 ಬದಿಯಡ್ಕ: ಹಿರಿಯ ಧಾರ್ಮಿಕ ಮುಂದಾಳು, ಕೃಷಿಕ ವಳಮಲೆ ‌ಪದ್ಮನಾಭ ಶೆಟ್ಟಿ(68) ನಿಧನರಾದರು. ಅಸೌಖ್ಯದಿಂದಾಗಿ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಇಂದು (ಶುಕ್ರವಾರ) ಬೆಳಗ್ಗೆ ಅವರು ಕೊನೆಯುಸಿರೆಳೆದರು. ಮೃತರು ಪತ್ನಿ ಮಲ್ಲಿಕಾ ಶೆಟ್ಟಿ, ಮಕ್ಕಳಾದ ಪ್ರತೀಕ್, ಪ್ರಣೀತ್, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.  ವಳಮಲೆ ಜನನ ತರವಾಡು ಸಮಿತಿ ಅಧ್ಯಕ್ಷ, ಬದಿಯಡ್ಕ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ ಅಧ್ಯಕ್ಷ, ಬಂಟರ ಸಂಘ ಕುಂಬಳೆ ಫಿರ್ಕಾ ಕಾರ್ಯದರ್ಶಿ ಸಹಿತ ಹಲವು ಸಾಮಾಜಿಕ ಧಾರ್ಮಿಕ ಹುದ್ದೆಗಳನ್ನು ಅಲಂಕರಿಸಿದ್ದರು. ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಯೂ ಆಗಿದ್ದರು

Post a Comment

0 Comments