Ticker

6/recent/ticker-posts

ಜ್ವರ ಬಾಧಿಸಿ‌ ಮೂರು ತಿಂಗಳ‌ ಮಗು ಮೃತ್ಯು


 ಮುಳ್ಳೇರಿಯ:  ಜ್ವರ ಬಾಧಿಸಿ ಮೂರು ತಿಂಗಳ ಮಗು ಮೃತಪಟ್ಟ ಘಟನೆ ‌ನಡೆದಿದೆ. ಆದೂರು ಮಞಂಪಾರ ನಿವಾಸಿ ಮಣಿ- ಹರಿಣಿ ದಂಪತಿಯ ಪುತ್ರಿ ಅನ್ಸಿಕ ಮೃತಪಟ್ಟ ಮಗು. ಎರಡು ದಿನಗಳ ಹಿಂದೆ‌ ಮಗುವಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಳ್ಳೇರಿಯದ ಆಸ್ಪತ್ರೆಗೆ ಬಂದಿದ್ದು ಡಾಕ್ಟರ್ ತಪಾಸಣೆ ನಡೆಸಿ ಔಷಧಿ ಪಡೆಯಲಾಗಿತ್ತು. ನಿನ್ನೆ (ಗುರುವಾರ) ಮತ್ತೆ ಜ್ವರ ಕಾಣಿಸಿಕೊಂಡಿದ್ದು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಮಗು ಕೊನೆಯುಸಿರೆಳೆದಿತ್ತು. ಆದೂರು ಪೊಲೀಸರು ಮಹಜರು ನಡೆಸಿದರು.

Post a Comment

0 Comments