Ticker

6/recent/ticker-posts

ಪಹಲ್ಗಾಂ ಭಯೋತ್ಪಾದಕ ದಾಳಿ ಬಗ್ಗೆ ವಿವಾದ ಫೇಸ್ ಬುಕ್ ಪೋಸ್ಟ್, ಮುಸ್ಲಿಂ ಲೀಗ್ ನೇತಾರ ಬಶೀರ್ ವೆಳ್ಳಿಕೋತ್ ವಿರುದ್ದ ಹೊಸದುರ್ಗ ಪೊಲೀಸರಿಂದ ಕೇಸು ದಾಖಲು


 ಕಾಞಂಗಾಡ್:  ಜಮ್ಮು ಕಾಶ್ಮೀರದ ಪಹಲ್ಗಾಂ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ  ದೇಶದ್ರೋಹ ಹೇಳಿಕೆ ನೀಡಿದ ಮುಸ್ಲಿಂ ಲೀಗ್ ನೇತಾರನ ವಿರುದ್ದ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ಮುಸ್ಲಿಂ ಲೀಗ್ ನೇತಾರ ಬಶೀರ್ ವೆಳ್ಳಿಕೋತ್ ವಿರುದ್ದ ಕೇಸು ದಾಖಲಿಸಲಾಗಿದೆ. ಹಿಂದು ಐಕ್ಯ ವೇದಿ ಜಿಲ್ಲಾ ಅಧ್ಯಕ್ಷ ಎಸ್.ಪಿ.ಶಾಜಿ  ನೀಡಿದ ದೂರಿನಂತೆ ಭಾರತೀಯ ನ್ಯಾಯ ಸಂಹಿತ 173 ಪ್ರಕಾರ ಕೇಸು ದಾಖಲಿಸಲಾಯಿತು.

  ಎಪ್ರಿಲ್ 23 ರಂದು ಎಸ್.ಪಿ.ಶಾಜಿಯವರಿಗೆ ಲಭಿಸಿದ ಫೇಸ್ ಬುಕ್ ಪೋಸ್ಟಿನಲ್ಲಿ  ಪಹಲ್ಗಾಂ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ಥಾನಿಗಳಲ್ಲವೆಂದೂ ಸಂಘ ಪರಿವಾರ ಎಂದೂ ಬರೆದಿರುವುದು ತಿಳಿದು ಬಂತು. ಇದೇ ವೇಳೆ ವಿವಾದ‌ ಪೋಸ್ಟ್  ಬಶೀರ್ ಬೆಳ್ಳಿಕೋತ್ ಹಿಂದಕ್ಕೆ ಪಡೆದಿದ್ದಾರೆ.

Post a Comment

0 Comments