Ticker

6/recent/ticker-posts

ಸ್ನಾನದ ಮನೆಯಿಂದ ವಿದ್ಯುತ್ ಶಾಕ್ ತಗುಲಿ 8 ನೇ ತರಗತಿ ವಿದ್ಯಾರ್ಥಿನಿ ಮೃತ್ಯು


 ಮನೆಯ ಸ್ನಾನದ ಮನೆಯಿಂದ ವಿದ್ಯುತ್ ಶಾಕ್ ತಗುಲಿ 8 ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಡೆದಿದೆ. ಕೋಜಿಕ್ಕೋಡ್ ಕೊಡುವಳ್ಳಿ ಎಡಕಾಟ್ಟ್ ನಿವಾಸಿ ಮೊಯ್ದೀನ್ ಕುಟ್ಟಿ ಸಖಾಫಿಯ ಪುತ್ರಿ ನಜಾ ಖದೀಜ(13)  ಮೃತಪಟ್ಟ ವಿದ್ಯಾರ್ಥಿನಿ. ಬುದವಾರ ಸಂಜೆ ನಾಲ್ಕು ಗಂಟೆಯ ವೇಳೆ ಸ್ನಾನ ‌ಮಾಡಲು ಹೋದ ನಜಾ ಖದೀಜಳಿಗೆ ವಿದ್ಯುತ್ ಶಾಕ್ ತಗುಲಿತ್ತು. ಕೂಡಲೇ ಕೋಜಿಕ್ಕೋಡ್ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಪ್ರಾಣ ಉಳಿಸಲಾಗಲಿಲ್ಲ. ಮೃತೆ ಬಾಲಕಿ ಕರುವನ್ ಪೋಯಿಲ್ ಸರಕಾರಿ ಹಯರ್ ಸೆಕಂಡರಿ ಶಾಲೆಯ ವಿದ್ಯಾರ್ಥಿನಿ.  ಮೃತದೇಹದ ಪೋಸ್ಟ್ ಮಾರ್ಟಂ ಇಂದು ನಡೆಯಲಿದೆ

Post a Comment

0 Comments