ಮುಂಡಿತ್ತಡ್ಕ : ಮುಗು ಶ್ರೀ ಸುಬ್ರಾಯ ದೇವ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಮೇ 18ಕ್ಕೆ ಕ್ಷೇತ್ರದಲ್ಲಿ ಅನುಜ್ಞಾ ಕಲಶ ಹಾಗೂ ಶ್ರೀ ದೇವರ ಬಾಲಾಲಯ ಪ್ರತಿಷ್ಠೆಯು ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರ ದಿವ್ಯ ನೇತೃತ್ವದಲ್ಲಿ ನಡೆಯಲಿರುವುದು.
ಇದರ ಅಂಗವಾಗಿ ಮೇ 17ಕ್ಕೆ ಸಂಜೆ ಗಂಟೆ 6.30ರ ನಂತರ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹವಾಚನ ಸ್ಥಳ ಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ ಜರಗಲಿದೆ. ಮೇ 18 ರಂದು ಬೆಳಗ್ಗೆ ಗಂಟೆ 7 ರಿಂದ ಗಣಪತಿ ಹೋಮ,ಅನುಜ್ಞಾಕಲಶ ಪೂಜೆ,ಅನುಜ್ಞಾ ಕಲಶಾಭಿಷೇಕ ಬಳಿಕ 10.40ರ ನಂತರದ ಶುಭ ಮುಹೂರ್ತದಲ್ಲಿ ಸುಬ್ರಾಯ ದೇವರ ಚೈತನ್ಯ ಉದ್ವಾಸನೆ, ಹಾಗೂ ಪರಿವಾರ ದೇವರ ಬಾಲಾಲಯ ಪ್ರತಿಷ್ಠೆ, ಮಹಾಪೂಜೆ,ಪ್ರಸಾದ ವಿತರಣೆ ಜರಗಲಿದೆ.ಕ್ಷೇತ್ರದಲ್ಲಿ ಗರ್ಭಗುಡಿ,ತೀರ್ಥ ಮಂಟಪ,ಸುತ್ತು ಪೌಳಿ ಮತ್ತು ವಸಂತಕಟ್ಟೆ, ಅರಾಟುಕೆರೆ,ಪಾಕಶಾಲೆ ಮೊದಲಾದ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು ಸುಮಾರು 6 ಕೋಟಿ ರೂಗಳ ವೆಚ್ಚ ಅಂದಾಜಿಸಲಾಗಿದೆ. ಈ ಸಂದರ್ಭದಲ್ಲಿ ಕ್ಷೇತ್ರ ಜೀರ್ಣೋದ್ಧಾರದ ನಿಧಿಕುಂಭ ಕಾಣಿಕೆ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
0 Comments