ಉಡುಪಿ :ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮಿಗಳವರ 15ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ವರ್ಧಂತ್ಯುತ್ಸವವು ಮೇ 22ರಂದು ಪಡುಕುತ್ಯಾರಿನ ಮಹಾಸಂಸ್ಥಾನದಲ್ಲಿ ನಡೆಯಲಿದೆ.
ಮೇ 22 ರಂದು ವರ್ಧಂತಿ ಉತ್ಸವದ ಅಂಗವಾಗಿ ಸಾಮೂಹಿಕ ಚಂಡಿಕಾಯಾಗ ವೈದಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆ, ವಾಸ್ತುಶಿಲ್ಪ ಮತ್ತು ಶಿಲ್ಪ ಕಲೆ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ, ಸಾಧಕರಿಗೆ ಆನೆಗುಂದಿ ಶ್ರೀ ಪ್ರಶಸ್ತಿ ಪ್ರಧಾನ, ಯುವಶಿಲ್ಪಿಗಳಿಗೆ ಅಭಿನಂದನೆ ನಡೆಯಲಿದೆ.
ಅಂದು ಬೆಳಿಗ್ಗೆ ಜಗದ್ಗುರುಗಳವರಿಂದ ಕಟಪಾಡಿ ಶ್ರೀಮಹಾಸಂಸ್ಥಾನದಲ್ಲಿ ಪಟ್ಟಾಭಿಷೇಕ ವರ್ಧಂತಿಯ ಸಂಬದಿತ ವಿವಿಧ ವೈದಿಕ ವಿಧಿ ವಿಧಾನಗಳ ನಡೆಯಲಿವೆ.
ಶ್ರೀಕರಾರ್ಚಿತ ದೇವತಾ ಪೂಜೆ ಬಳಿಕ ಕಟಪಾಡಿಯಲ್ಲಿರುವ ಅನಂತಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾವನದಲ್ಲಿ ಜಗದ್ಗುರುಗಳವರಿಂದ ಪೂಜೆ ನಡೆಯಲಿದೆ.ಬಳಿಕ ಪಡುಕುತ್ಯಾರಿನ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ದಕ್ಷಿಣಾಮೂರ್ತಿ ಯಜ್ಞ, ಶ್ರೀ ರುದ್ರ ಯಜ್ಞ, ಸಾಮೂಹಿಕ ಶ್ರೀ ಚಂಡಿಕಾ ಯಾಗ ಪೂರ್ಣಾಹುತಿ ನಡೆಯಲಿದೆ. ನಂತರ ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಜಗದ್ಗುರುಗಳವರ ಪಾದಪೂಜೆಯ ಬಳಿಕ ಮಹಾಸಂಸ್ಥಾನದ ಪ್ರಥಮ ವಿಶ್ವಸ್ಥರಾಗಿರುವ ದೇವಸ್ಥಾನಗಳ ಧರ್ಮದರ್ಶಿಗಳವರಿಂದ,ವಾಡಿಕೆಯಂತೆ ಆಯಾ ದೇವಸ್ಥಾನಗಳ ವತಿಯಿಂದ ಜಗದ್ಗುರುಗಳವರಿಗೆ ಫಲನ್ಯಾಸ, ದೇವಸ್ಥಾನಗಳಲ್ಲಿ ವಾರ್ಷಿಕ ಸಂಗ್ರಹಿತ ಗುರುಕಾಣಿಕೆ ಸಮರ್ಪಣೆ ಪಟ್ಟಾಭಿಷೇಕ ವರ್ಧಂತಿಯ ವಿಧಿ ವಿಧಾನಗಳ ನಡೆಯಲಿವೆ.
ಮೋರ್ಸಿಂಗ್ ಸಾಮ್ರಾಟ್ ವಿದ್ವಾನ್ ಎಲ್ ಭೀಮಾಚಾರ್ ಮಕ್ಕಳಾದ ವಿದ್ವಾನ್ ರಾಜಶೇಖರ ಎಲ್ ಭೀಮಾಚಾರ್ ಬೆಂಗಳೂರು ವಿದುಷಿ ಭಾಗ್ಯಲಕ್ಷ್ಮೀ ಕೃಷ್ಣ ತಂಡದವರಿಂದ ಮೋರ್ಸಿಂಗ್ ತರಂಗಲಯ ಕಾರ್ಯಕ್ರಮ ನಡೆಯಲಿದೆ.
ನಂತರ ನಡೆಯು ಧಾರ್ಮಿಕ ಸಭೆಯಲ್ಲಿ ಪಡುಕುತ್ಯಾರು ಮಹಾಸಂಸ್ಥಾನದ ಶ್ರೀ ಸರಸ್ವತೀ ಸತ್ಸಂಗ ಮಂದಿರ ಧರ್ಮ ಸಭೆಯಲ್ಲಿ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಲಿದ್ದಾರೆ. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಇದೇ ವೇಳೆ ಚಾಳುಕ್ಯ ಶಿಲ್ಪಿ ಲಿಪಿಕಾರ ಶ್ರೀ ಅಕ್ಷರಮೇರು ದಾಮೋದರಾಚಾರಿ ಸಾಹಿತ್ಯ ಸರಸ್ವತೀ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ,ಮಹಾ ಶಿಲ್ಪಿ ಶ್ರೀ ಗುಂಡನ್ ಅನಿವಾರಿತಾಚಾರಿ ತ್ರಿಭುವನಾಚಾರಿ ರಾಷ್ಟ್ರೀಯ ಪ್ರಶಸ್ತಿ ,ಹೊಯ್ಸಳ ಮಹಾಶಿಲ್ಪಿ ಮಲ್ಲಿಂತಮ ರಾಷ್ಟ್ರೀಯ ಪ್ರಶಸ್ತಿ, ವಾಸ್ತು ಪಿತಾಮಹನ್ ಸ್ವರ್ವಸಿದ್ಧಿ ಆಚಾರಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಆನೆಗುಂದಿಶ್ರೀ ಪ್ರಶಸ್ತಿ ಪ್ರದಾನ ನಡೆಯಲಿದೆ.
ರಾಷ್ಟೀಯ ಪ್ರಶಸ್ತಿ ಪ್ರದಾನ
ಚಾಳುಕ್ಯ ಶಿಲ್ಪಿ ಲಿಪಿಕಾರ ಶ್ರೀ ಅಕ್ಷರಮೇರು ದಾಮೋದರಾಚಾರಿ ಸಾಹಿತ್ಯ ಸರಸ್ವತೀ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ: ಖ್ಯಾತ ಸಂಶೋಧಕರು, ಲೇಖಕರು ಹಾಗೂ ವಿದ್ವಾಂಸರಾದ ಡಾ.ಜಿ ಜ್ಞಾನಾನಂದ ಬೆಂಗಳೂರು, .ಮಹಾ ಶಿಲ್ಪಿ ಶ್ರೀ ಗುಂಡನ್ ಅನಿವಾರಿತಾಚಾರಿ ತ್ರಿಭುವನಾಚಾರಿ ರಾಷ್ಟ್ರೀಯ ಪ್ರಶಸ್ತಿ: ಖ್ಯಾತ ಸ್ಥಪತಿಗಳು ಪಾರಂಪರಿಕ ಶಿಲ್ಪಿಗಳಾದ ಶಿಲ್ಪಾಚಾರ್ಯ ಕೆ.ಪಿ .ಉಮಾಪತಿ ಆಚಾರ್ಯ ಕುಂಭಕೋಣಂ
.ಹೊಯ್ಸಳ ಮಹಾಶಿಲ್ಪಿ ಮಲ್ಲಿಂತಮ ರಾಷ್ಟ್ರೀಯ ಪ್ರಶಸ್ತಿ: ಶಿಲ್ಪಿ ಜಯಣ್ಣ ಆಚಾರ್ಯ ಚಿಕ್ಕಮಗಳೂರು
ವಾಸ್ತು ಪಿತಾಮಹನ್ ಸ್ವರ್ವಸಿದ್ಧಿ ಆಚಾರಿ ರಾಷ್ಟ್ರೀಯ ಪ್ರಶಸ್ತಿ : ಪಾರಂಪರಿಕ ದೇವಾಲಯ ವಾಸ್ತುಶಿಲ್ಪಿಗಳಾದ ಸ್ಥಪತಿ ಡಾ.ಕೆ ದಕ್ಷಿಣಾಮೂರ್ತಿ ಚೆನ್ನೈ
.
ಮೂಡಬಿದ್ರೆ ಎಸ್. ಕೆ. ಎಫ್ ಎಲಿಕ್ಸರ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕರಾದ ಡಾ. ಜಿ.ರಾಮಕೃಷ್ಣ ಆಚಾರ್ ಅಧ್ಯಕ್ಷರಾಗಿ ಹಾಗೂ ಡಾ. ಬಿ.ಶ್ರೀಕಂಠಾಚಾರ್ ಇ.ಎಂ.ಆರ್.ಸಿ. ಮೈಸೂರು ವಿಶ್ವವಿದ್ಯಾನಿಲಯ ಸಂಚಾಲಕರಾಗಿರುವ ಮಹಾಸಂಸ್ಥಾನದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಿತಿಯು ಈ ಮೇಲಿನವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಆನೆಗುಂದಿಶ್ರೀ ಪ್ರಶಸ್ತಿ ಪ್ರದಾನ
ಮಹಾಸಂಸ್ಥಾನದ ವತಿಯಿಂದ ಕಲೆ, ಸಮಾಜ ಸೇವೆ, ಶಿಲ್ಪಗಳಿಗೆ ನೀಡಲಾಗುವ ಆನೆಗುಂದಿಶ್ರೀ ಪ್ರಶಸ್ತಿಯನ್ನು ಶ್ರೀ ಸಚಿನ್ ಗಿರ್ಗಾವಕರ್ ಉದ್ಯಮಿ ವಿಶ್ವಕರ್ಮನಗರ ಸಂಸ್ಥಾಪಕರು ವಿಜಯಪುರ ,ಶ್ರೀ ಸುಬ್ರಾಯ ಆಚಾರ್ಯ ಇನ್ನಂಜೆ ಸಮಾಜ ಸೇವಕರು,ಶಿಲ್ಪಿ ಹರಿಶ್ಚಂದ್ರ ಆಚಾರ್ಯ ನೆಟ್ಟಣಿಗೆ, ವಾಸ್ತುಶಿಲ್ಪಿಗಳು, ವಿದ್ವಾನ್ ರಾಜಶೇಖರ ಎಲ್ ಭೀಮಾಚಾರ್ ಬೆಂಗಳೂರು ಅಂತಾರಾಷ್ಟ್ರೀಯ ಮೋರ್ಸಿಂಗ್ ವಾದಕರು ಇವರಿಗೆ ಪ್ರದಾನ ಮಾಡಲಾಗುವುದು.
ಎಸ್ ಕೆ ಎಫ್ ಸಮೂಹ ಸಂಸ್ಥೆಗಳು ಬನ್ನಡ್ಕ ಮೂಡಬಿದ್ರೆ ಇವರು ನಿರ್ಮಿಸಿದ ಪಂಚಶಿಲ್ಪಗಳಲ್ಲಿ ಆಧುನಿಕತೆ ವಿನೂತನ ತಾಂತ್ರಿಕತೆ ನವನವೀನ ಆವಿಷ್ಕಾರ ಕುರಿತು ಮಹಾಸಂಸ್ಥಾನದ ಕಿರು ಸಾಕ್ಷ್ಯ ಚಿತ್ರ ಮಹಾಶಿಲ್ಪಿ ಲೋಕಾರ್ಪಣೆ ನಡೆಯಲಿದೆ.
ಸಭೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರ ಶಾಸಕರಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆ , ಧಾರವಾಡ ಮೇಯರ್ ಶ್ರೀ ರಾಮಣ್ಣ ಬಡಿಗೇರ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಿತಿ ಅದ್ಯಕ್ಷರಾದ ಮೂಡಬಿದ್ರೆ ಎಸ್. ಕೆ. ಎಫ್ ಎಲಿಕ್ಸರ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕರಾದ ಡಾ. ಜಿ.ರಾಮಕೃಷ್ಣ ಆಚಾರ್, ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕ ಡಾ. ಬಿ.ಶ್ರೀಕಂಠಾಚಾರ್ ಇ.ಎಂ.ಆರ್.ಸಿ. ಮೈಸೂರು ವಿಶ್ವವಿದ್ಯಾನಿಲಯ, ಉದ್ಯಮಿ ಶ್ರೀ ನಿರಂಜನ ಆಚಾರ್ಯ ಬಡಿಗೇರ ಧಾರವಾಡ, ಶ್ರೀ ವೈದ್ಯನಾಥ ಸ್ವಾಮಿ ಕಾಮಾಕ್ಷಿಯಮ್ಮ ದೇವಸ್ಥಾನ ಧರಾಸುರಂ ಕುಂಭಕೋಣಂ ಅಧ್ಯಕ್ಷ ಶ್ರೀ ಟಿ.ಎಂ ರಾಜೇಂದ್ರನ್ , ಡಾ. ಪ್ರಭಾಕರ ಗೋವಿಂದ ಆಚಾರ್ಯ ಸ್ಥಪತಿಗಳು ಕುಂಭಕೋಣಂ,ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಆಸ್ಥಾನ ವಿದ್ವಾಂಸರಾದ ವಿದ್ವಾನ್ ಮಹಾಮಹೋಪಾಧ್ಯಾಯ ಪಂಜ ಭಾಸ್ಕರ ಭಟ್, ಘನಪಾಠಿ ವಿದ್ವಾನ್ ಬಾಲಚಂದ್ರ ಭಟ್ ಚಂದುಕೂಡ್ಲು , ಅಂತರಾಷ್ಟ್ರೀಯ ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು, ವಿದ್ವಾನ್ ವೇ.ಬ್ರ. ಶ್ರೀ ಶಂಕರ ಆಚಾರ್ಯ ಕಡ್ಲಾಸ್ಕರ್ (ಪಂಡಿತ್), ಹುಬ್ಬಳ್ಳಿ ಘನ ಉಪಸ್ಥಿತಿಯಲ್ಲಿ ನಡೆಯುವ ಸಭೆಯಲ್ಲಿ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಶ್ರೀ ಪಿ ವಿ ಗಂಗಾಧರ ಆಚಾರ್ಯ ಉಡುಪಿ ಕುತ್ಯಾರು ಗ್ರಾಮ ಪಂಚಾಯತ್ ಆಧ್ಯಕ್ಷ ಶ್ರೀ ಜನಾರ್ದನ ಆಚಾರ್ಯ ಕಳತ್ತೂರು ಆನೆಗುಂದಿ ಮೂಲ ಮಠ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ , ಶ್ರೀ ನಾಗರಾಜ ಆಚಾರ್ಯ ಕಾಡಬೆಟ್ಟು, ಕರಾವಳಿ, ಬೆಂಗಳೂರು, ಹುಬ್ಬಳ್ಳಿ, ಮುಂಬೈ ಕಾಳಿಕಾಂಬಾ ದೇವಾಲಯಗಳ ಧರ್ಮದರ್ಶಿಗಳು ಹಾಗೂ ಮಹಾಸಂಸ್ಥಾನದ ವಿವಿಧ ಸಮಿತಿಗಳ ಪ್ರಮುಖರು, ಹಾಗೂ ವಿವಿಧ ಪ್ರಮುಖ ಸಂಘ ಸಂಸ್ಥೆಗಳ ಮುಖ್ಯಸ್ಥರಾದ ಭಾಗವಹಿಸುವರು.
ದೇವಸ್ಥಾನಗಳ ಧರ್ಮದರ್ಶಿಗಳಾದ ಶ್ರೀ ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ, ಶ್ರೀ ಕೆ. ಪ್ರಭಾಕರ ಆಚಾರ್ಯ ಮಧೂರು, ಶ್ರೀ ಮಧುಕರ ಚಂದ್ರಶೇಖರ ಆಚಾರ್ಯ ಗೋಕರ್ಣ , ಶ್ರೀ ಬಾಲಕೃಷ್ಣ ಆಚಾರ್ಯ ಮೂಡಬಿದ್ರೆ, ಶ್ರೀ ಮುರಹರಿ ಆಚಾರ್ಯ ಕಟಪಾಡಿ, ಶ್ರೀ ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ,,ಶ್ರೀ ಗಣೇಶ ಆಚಾರ್ಯ, ಕಾಪು ,ಶ್ರೀ ಕೆ. ಸುಧಾಕರ ಆಚಾರ್ಯ, ಕೊಲಕಾಡಿ,ಶ್ರೀ ಸುಂದರ ಆಚಾರ್ಯ, ಕೋಟೆಕಾರು ,ಶ್ರೀ ಬಿ.ಎಂ ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ ಶ್ರೀ ಜನಾರ್ದನ ಆಚಾರ್ಯ ಆರಿಕ್ಕಾಡಿ, , ಶ್ರೀ ಪುರುಷೋತ್ತಮ ಆಚಾರ್ಯ ಕಾಞಂಗಾಡು, ಶ್ರೀ ಗಜಾನನ ಆರ್ . ಆಚಾರ್ಯ ಭಟ್ಕಳ, ಶ್ರೀ ಸಿ.ಎ ಶ್ರೀಧರ ಆಚಾರ್ಯ ಪನ್ವೇಲ್ ಮುಂಬಯಿ, ಶ್ರೀ ಚಿಕ್ಕಣ್ಣ ಆಚಾರ್ ಬೆಂಗಳೂರು, ಶ್ರೀ ನಾಗರಾಜ ಹಾವನೂರ ಹಳೇ ಹುಬ್ಬಳ್ಳಿ, ಶ್ರೀ ದತ್ತಾ ಎಂ ಆಚಾರ್ಯ ಅಂಕೋಲ , ಶ್ರೀ ಜಗದೀಶ್ ಆಚಾರ್ಯ ಪಡುಪಣಂಬೂರು, ಶ್ರೀ ಗುರುನಾಥ ಪಟ್ಟಣಕೋಡಿ ಧಾರವಾಡ ಇವರು ಭಾಗವಹಿಸುವರು.
ಮಹಾಸಂಸ್ಥಾನದ ವಿವಿಧ ಸಮಿತಿಗಳ ಪ್ರಮುಖರಾದ ಶ್ರೀ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಶ್ರೀ ಗಣೇಶ್ ಆಚಾರ್ಯ ಕೆಮ್ಮಣ್ಣು, ಶ್ರೀ ಸುಂದರ ಆಚಾರ್ಯ ಬೆಳುವಾಯಿ, ಶ್ರೀಮತಿ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಆನೆಗುಂದಿ ಶಾಖಾ ಮಠ ಸಮಿತಿ ಬೆಂಗಳೂರು ಅಧ್ಯಕ್ಷ ಶ್ರೀ ಹರಿಶ್ಚಂದ್ರ ಎನ್. ಆಚಾರ್ಯ ಬೆಂಗಳೂರು, ,ಶ್ರೀ ಕೃಷ್ಣ ವಿ. ಆಚಾರ್ಯ, ಮುಂಬಯಿ, ಶ್ರೀಧರ ವಿ ಆಚಾರ್ಯ ಮುಂಬಯಿ, ಶ್ರೀ ಜಿ.ಟಿ ಆಚಾರ್ಯ ಮುಂಬಯಿ,ಶ್ರೀ ಶುಭಕರ ಎನ್. ಆಚಾರ್ಯ, ಕೊಯಂಬತ್ತೂರು, , ವಿವಿಧ ಪ್ರಮುಖ ಸಂಘ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ರವೀಶ್ ಜಿ ಆಚಾರ್ಯ ಮುಂಬಯಿ,ಶ್ರೀ ತುಕಾರಾಮ ಆಚಾರ್ಯ ಬೆಂಗಳೂರು, ಶ್ರೀ ವಿ.ಎಸ್ ಮೋಹನ ಆಚಾರ್ಯ ಬೆಂಗಳೂರು, ಶ್ರೀ ಯು.ಎಸ್.ಗಿರೀಶ್ ಆಚಾರ್ಯ ಕೊಯಂಬುತ್ತೂರು, ಶ್ರೀ ಯೋಗೀಶ್ ಆಚಾರ್ಯ ಕೊಯಂಬತ್ತೂರು ಇವರ ಉಪಸ್ಥಿತಿಯಲ್ಲಿ ಸಮಾರಂಭ ಸಂಪನ್ನಗೊಳ್ಳಲಿದೆ.
ಪಟ್ಟಾಭಿಷೇಕ ಮಹೋತ್ಸವದ ವರ್ಧಂತಿಯ ಪುಣ್ಯ ಸಮಾರಂಭದಲ್ಲಿ ಸಮಸ್ತ ಸಮಾಜ ಬಾಂಧವರು ಬಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಗದ್ಗುರಗಳವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಆನೆಗಂದಿ ಪ್ರತಿಷ್ಠಾನವು ಕೋರಿದೆ.
0 Comments