Ticker

6/recent/ticker-posts

Ad Code

ಎಲ್ ಎಸ್ ಎಸ್ ಪರೀಕ್ಷೆಯಲ್ಲಿ ಮಿಂಚಿದ ನಲ್ಕ ಶಾಲೆಯ ವಿದ್ಯಾರ್ಥಿಗಳು


ಪೆರ್ಲ: ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ 2024-25 ಶೈಕ್ಷಣಿಕ ವರ್ಷದ ಎಲ್ ಎಸ್ ಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆದು ಸ್ಕಾಲರ್ ಶಿಪ್ ಗೆ ನಲ್ಕ ವಾಗ್ದೇವಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅಧ್ಯಾಪಕ ಅಶ್ರಫ್ ಮರ್ತ್ಯ-ಫಾತಿಮತ್ ಇರ್ಪ್ರಾನ ದಂಪತಿಗಳ ಪುತ್ರ ಮಹಮ್ಮದ್ ರಫಾನ್ ಮರ್ತ್ಯ ಹಾಗೂ ರವಿಶಂಕರ ಭಟ್ ಕಲ್ಲುಕುಟ್ಟಿಮೂಲೆ - ಶ್ರೀಲಕ್ಷ್ಮಿ ದಂಪತಿಗಳ ಪುತ್ರಿ ಶ್ರೀವಿದ್ಯಾ  ಎಲ್ ಎಸ್ ಎಸ್  ಪರೀಕ್ಷೆ ಪಾಸಾದ ಪ್ರತಿಭೆಗಳು. 

ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಶಾಲಾ ಪ್ರಬಂಧಕರು, ಮುಖ್ಯೋಪಾಧ್ಯಾಯರು, ಅಧ್ಯಾಪಕರು,ಪಿಟಿಎ ಸಮಿತಿ ಅಭಿನಂದಿಸಿದೆ.

Post a Comment

0 Comments