Ticker

6/recent/ticker-posts

Ad Code

ರಾಜಮಾತಾ ಅಹಲ್ಯ ಭಾಯಿ ಹೋಳ್ಕರ್ ಅವರ 300 ನೇ ಜನ್ಮವಾರ್ಷಿಕ ಬಿಜೆಪಿ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಕಾರ್ಯಾಗಾರ


 ಕಾಸರಗೋಡು:  ರಾಜಮಾತಾ ಅಹಲ್ಯ ಭಾಯಿ ಹೋಳ್ಕರ್ ಅವರ 300 ನೇ ಜನ್ಮವಾರ್ಷಿಕದ ಅಂಗವಾಗಿ ಅಹಲ್ಯಾ ಭಾಯಿ ಅವರ ಜೀವನ ಹಾಗೂ ಚಟುವಟಿಕೆಗಳನ್ನು ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಪಕ್ಷದ ಜಿಲ್ಲಾ ಸಮಿತಿಯ ಆಶ್ರಯದಲ್ಲಿ

 ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ ಉದ್ಘಾಟಿಸಿದರು.  ಶತಮಾನಗಳ ಮೊದಲೇ ಮಹಿಳೆಯರ ಶಾಕ್ತೀಕರಣ ಭಾರತದಲ್ಲಿ ಜಾರಿಗೊಳಿಸಲು ಅಹಲ್ಯ ಭಾಯಿ ಕೇಳ್ಕರ್ ಪ್ರಯತ್ನಿಸಿದ್ದರು ಎಂದವರು ಹೇಳಿದರು. ಪಕ್ಷದ ಜಿಲ್ಲಾ ಸಮಿತಿಯ ಮಾಜಿ ಕಾರ್ಯದರ್ಶಿ ವೇಲಾಯುಧನ್ ವಿಷಯ ಮಂಡಿಸಿದರು

ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಅಧ್ಯಕ್ಷತೆ ವಹಿಸಿದರು. ಪಕ್ಷದ ಮುಂದಾಳುಗಳಾದ ರವೀಶ ತಂತ್ರಿ ಕುಂಟಾರು, ಪಿ.ಆರ್.ಸುನಿಲ್, ಎನ್.ಬಾಬುರಾಜ್, ಮನುಲಾಲ್ ಮೇಲತ್, ಪುಷ್ಪ ಗೋಪಾಲನ್, ಮುರಳೀಧರ ಯಾದವ್ ಮೊದಲಾದವರು ಮಾತನಾಡಿದರು

Post a Comment

0 Comments