Ticker

6/recent/ticker-posts

Ad Code

ಮಾವಿನಹಣ್ಣು ತಿನ್ನುವ ಮಧ್ಯೆ ಗೊರಟು ಗಂಟಲಲ್ಲಿ ಸಿಲುಕಿ ಟೈಲರ್ ಮೃತ್ಯು


 ಕಾಸರಗೋಡು:  ಮಾವಿನ ಹಣ್ಣು ತಿನ್ನುವ ಮಧ್ಯೆ ಗೊರಟು ಗಂಟಲಲ್ಲಿ ಸಿಲುಕಿ ವ್ಯಕ್ತಿ ಮೃತಪಟ್ಟ ಘಟನೆ ‌ನಡೆದಿದೆ. ಕಾಸರಗೋಡು ನಗರದ ಜವುಳಿ ಅಂಗಡಿಯಲ್ಲಿ ಟೈಲರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೊಗ್ರಾಲು ಪುತ್ತೂರು ಶಾಸ್ತಾ ನಗರ ನಿವಾಸಿ ರಾಘವನ್(76) ಮೃತಪಟ್ಟ ವ್ಯಕ್ತಿ.  ಅವರು ಇಂದು (ಬುದವಾರ) ಬೆಳಗ್ಗೆ ಮನೆಯಿಂದ ಕೆಲಸಕ್ಕೆಂದು ಹೋಗಿದ್ದರು. ಆದರೆ ದಾರಿ ಮಧ್ಯೆ ಅವರು ಅರೆ ಪ್ರಜ್ಞಾವಸ್ತೆಯಲ್ಲಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಅವರು ಮಾವಿನ ಹಣ್ಣು ತಿಂದಾಗ ಗೊರಟು ಗಂಟಲಲ್ಲಿ ಸಿಲುಕಿ ಮೃತಪಟ್ಟಿರಬೇಕು ಎಂದು ಸಂಶಯಿಸಲಾಗಿದೆ.    ಮೃತರು ಪತ್ನಿ ನಿರ್ಮಲ, ಮಕ್ಕಳಾದ ಗಣೇಶ್, ಅವಿನಾಶ್, ಅನಿತ, ಸರಿತ, ಸೊಸೆ ಸೌಮ್ಯ, ಅಳಿಯಂದಿರಾದ ಮನೋಜ್, ಅಜಿತ್, ಸಹೋದರಿಯರಾದ ಪ್ರೇಮ, ಸೀಮಂದಿ ಎಂಬುವರನ್ನು ಅಗಲಿದ್ದಾರೆ

Post a Comment

0 Comments