Ticker

6/recent/ticker-posts

Ad Code

ನೇಪಾಳದಲ್ಲಿ ನಡೆಯಲಿರುವ ಏಷ್ಯನ್ ಸಾಫ್ಟ್ ಬೇಸ್ ಬಾಲ್ ಪಂದ್ಯಾಟಕ್ಕೆ ಮಂಜೇಶ್ವರದ ಶ್ರಾವ್ಯ ಕನಿಯಾಲ ಆಯ್ಕೆ

 


ಮಂಜೇಶ್ವರ : ಜೂ 17ರಿಂದ 21ರ ತನಕ ನೇಪಾಳದಲ್ಲಿ ಜರಗಲಿರುವ ಏಷ್ಯನ್ ಸಾಫ್ಟ್ ಬೇಸ್ ಬಾಲ್ ಪಂದ್ಯಾಟಕ್ಕೆ ಮಂಜೇಶ್ವರ ತಾಲೂಕಿನ  ಶ್ರಾವ್ಯ ಕನಿಯಾಲ ಆಯ್ಕೆಯಾಗಿದ್ದಾಳೆ. ಕಾಂಞಂಗಾಡಿನ ನೆಹರು ಆರ್ಟ್ಸ್ ಎಂಡ್ ಸಯನ್ಸ್ ಕಾಲೇಜಿನಲ್ಲಿ ಬಿ.ಕಾಂ.ವಿದ್ಯಾರ್ಥಿನಿಯಾದ ಈಕೆ ಕನಿಯಾಲದ ಸುಂದರ - ಕಮಲ ದಂಪತಿಗಳ ಪುತ್ರಿಯಾಗಿದ್ದಾಳೆ. ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿನಿಯಾದ ಈಕೆ ರಾಜ್ಯ ,ರಾಷ್ಟ್ರ ಮಟ್ಟದ ತಂಡಗಳಲ್ಲಿ ಭಾಗವಹಿಸಿ ಚಾಂಪ್ಯನ್ ಶಿಪ್ ಪಡೆದು ಅಂತಾರಾಷ್ಟ್ರ ಮಟ್ಟದ ಪಂದ್ಯಾಟಗಳಲ್ಲಿ ಕೂಡ ಭಾಗವಹಿಸಿ ಉತ್ತಮ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರನ್ನು ಅಂಬೇಡ್ಕರ್ ವಿಚಾರ ವೇದಿಕೆಯ ವತಿಯಿಂದ

ನೀರ್ಚಾಲು  ಶ್ರೀ ದುರ್ಗಾ ಕಂಪೌಂಡು ಹಾಲ್ ನಲ್ಲಿ   ಜರಗಿದ  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಅತಿಥಿಗಳ ಸಮ್ಮುಖದಲ್ಲಿ ಅಭಿನಂದಿಸಲಾಗಿತ್ತು .

Post a Comment

0 Comments