Ticker

6/recent/ticker-posts

Ad Code

ಕೇರಳ ಪ್ಲಸ್ ಟು ಪರೀಕ್ಷೆಯಲ್ಲಿ ಜಿಲ್ಲೆಗೆ ಅಭಿಮಾನ ಮೂಡಿಸಿದ ಪೆರ್ಲದ ಶ್ರೀರಂಜಿನಿ


ಪೆರ್ಲ: ಕೇರಳ ರಾಜ್ಯ +2. ಪರೀಕ್ಷೆಯಲ್ಲಿ ವಾಣಿಜ್ಯ(Commerce ) ವಿಭಾಗದ ಎಲ್ಲಾ ವಿಷಯದಲ್ಲೂ A+ ,1200/1200 ಅಂಕಗಳನ್ನೂ ಗಳಿಸಿ ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ಜಿಲ್ಲೆಯ ಹೆಮ್ಮೆಯ ವಿದ್ಯಾರ್ಥಿನಿ ಶ್ರೀರಂಜಿನಿ ಸಾಧನೆ ಮೆರೆದಿದ್ದಾಳೆ.  ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ  ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯಾದ ಈಕೆ ಪೆರ್ಲದ ಟಿವಿ ಮೆಕಾನಿಕ್  ಸರವು ರಾಮಕೃಷ್ಣ ಭಟ್ ಹಾಗೂ ಕಜಂಪಾಡಿ ಪ್ರಿ ಪ್ರೈಮರಿ ಶಾಲಾ ಅಧ್ಯಾಪಿಕೆ ಶ್ರೀಮತಿ ಭುವನೇಶ್ವರಿ ದಂಪತಿಯ ಏಕ ಪುತ್ರಿಯಾಗಿದ್ದಾಳೆ.

ಕಜಂಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಪೆರ್ಲ ಸತ್ಯನಾರಾಯಣ ಶಾಲೆಗಳಲ್ಲಿ ಕನ್ನಡ ಮಾದ್ಯಮದಲ್ಲಿ ವ್ಯಾಸಂಗ ಮಾಡಿದ ಹಳೆ ವಿದ್ಯಾರ್ಥಿನಿಯಾದ ಈಕೆ  ಎಸ್ ಎಸ್ ಎಲ್ ಸಿ ಯಲ್ಲೂ ಎಲ್ಲಾ  ವಿಷಯಗಳಲ್ಲೂ A + ಪಡೆದಿದ್ದಳು.ಮುಂದೆ ಲೆಕ್ಕ ಪರಿಶೋಧಕಿ (CA Charted Accountant) ಆಗಬೇಕೆಂಬ ಮನದಾಳದ ಅಭಿಲಾಷೆಯನ್ನು ವ್ಯಕ್ತಪಡಿಸುವ ಶ್ರೀರಂಜಿನಿಯು‌ ಕನ್ನಡ ಮಾದ್ಯಮದಲ್ಲಿ ಕಲಿತ ಕನ್ನಡ ವಿದ್ಯಾರ್ಥಿಯ ಈ ಸಾಧನೆಯನ್ನು ಕಾಸರಗೋಡಿನ‌ ಕನ್ನಡಿಗರು ಅಭಿನಂದಿಸಿದ್ದಾರೆ.

Post a Comment

0 Comments