ತಿರುವನಂತಪುರಂ: ಕೆ.ಎಸ್.ಆರ್.ಟಿ.ಸಿ.ಬಸ್ ಸಿಬಂದಿಗಳು ಕರ್ತವ್ಯದ ವೇಳೆ ಮದ್ಯ ಸೇವಿಸುತ್ತಾರೆಯೇ ಎಂದು ಪರಿಶೋಧನೆಗೆ ನಿಯುಕ್ತಿಗೊಂಡಾತ ಮದ್ಯ ಸೇವಿಸಿ ಕರ್ತವ್ಯಕ್ಕೆ ಹಾಜರಾದ ಘಟನೆ ನಡೆದಿದೆ. ಇದಕ್ಕೆ ಸಂಬಂದಪಟ್ಟಂತೆ ತಿರುವನಂತಪುರಂ ನೆಯ್ಯಾಟಿಂಗರ ಸಾರಿಗೆ ಡಿಪೊ ಇನ್ಸ್ಪೆಕ್ಟರ್ ಎಂ.ಎಸ್.ಮನೋಜ್ ಎಂಬಾತನನ್ನು ಸಸ್ಪೆಂಡ್ ಮಾಡಲಾಗಿದೆ. ಮೇ.2 ರಂದು ಘಟನೆ ನಡೆದಿದೆ.
ಕೇರಳ ಕೆ.ಎಸ್.ಆರ್.ಟಿ.ಸಿ.ಬಸ್ ಸಿಬಂದಿಗಳಲ್ಲಿ ಕೆಲವರು ಕರ್ತವ್ಯದ ವೇಳೆ ಮದ್ಯ ಸೇವಿಸುತ್ತಿದ್ದಾರೆ ಎಂಬ ದೂರು ವ್ಯಾಪಕವಾಗಿತ್ತು ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಡಿಪೋದಲ್ಲೂ ದಿನಕ್ಕೋರ್ವ ಇನ್ಸ್ಪೆಕ್ಟರ್ ನನ್ನು ಈ ಬಗ್ಗೆ ಪರಿಶೋಧನೆಗೆ ನೇಮಿಸಲಾಗಿತ್ತು. ಮೇ.2 ರಂದು ಎಂ.ಎಸ್.ಮನೋಜ್ ಈ ಕೆಲಸಕ್ಕೆ ನೇಮಿಸಲಾಯಿತು. ಆದರೆ ಅಂದು ಬೆಳಗ್ಗೆ ಡಿಪೋಗೆ ಮನೋಜ್ ತೂರಾಡಿಕೊಂಡು ಬಂದನೆನ್ನಲಾಗಿದೆ. ಡಿಪೋದಲ್ಲಿ ಇತರ ಅಧಿಕಾರಿಗಳನ್ನು ಕಂಡಾಗ ಅಲ್ಲಿಂದ ಕಾಲ್ಕಿತ್ತನೆಂದೂ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಎಂ.ಎಸ್.ಮನೋಜ್ ನನ್ನು ಕರ್ತವ್ಯದಿಂದ ಸಸ್ಪೆಂಡ್ ಮಾಡಲಾಗಿದೆ
0 Comments