Ticker

6/recent/ticker-posts

Ad Code

ಮೀನು ಹಿಡಿಯಲೆಂದು ತೋಡಿನಲ್ಲಿಳಿದ ಸಹೋದರರಿಬ್ಬರು ವಿದ್ಯುತ್ ಶಾಕ್ ತಗುಲಿ ಮೃತ್ಯು


 ಮೀನು ಹಿಡಿಯಲೆಂದು ತೋಡಿಗೆ ಇಳಿದ ಸಹೋದರರಿಬ್ಬರು ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕೋಜಿಕ್ಕೋಡ್ ಕೋಡಂಜೇರಿ  ನಿವಾಸಿ ಬಿಜು- ಶೀಬಾ ದಂಪತಿಯ ಮಕ್ಕಳಾದ ನಿಧಿನ್(14), ಎಬಿನ್(10) ಮೃತಪಟ್ಟವರು. ಆದಿತ್ಯವಾರ ಸಾಯಂಕಾಲ 6.30 ಕ್ಕೆ ಈ ಘಟನೆ ನಡೆದಿದೆ.

    ನಿಧಿನ್ ಹಾಗೂ ಎಬಿನ್ ಇಬ್ಬರೂ ಮನೆಯ ಬಳಿಯಲ್ಲೇ ಇರುವ ತೋಡಿನಲ್ಲಿ ಮೀನು ಹಿಡಿಯಲೆಂದು ಇಳಿದಿದ್ದರು. ಈ ವೇಳೆ ಬಲವಾದ ಗಾಳಿ ಬೀಸಿದ್ದು ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದಿದೆ. ಈ ರಭಸಕ್ಕೆ ವಿದ್ಯುತ್ ಕಂಬ ತೋಡಿಗೆ ಬಿದ್ದಿದ್ದು  ವಿದ್ಯುತ್ ತಂತಿ ನೀರಲ್ಲಿ ಮುಳುಗಿ ವಿದ್ಯುತ್ ಪ್ರವಹಿಸಿ ಮಕ್ಕಳಿಬ್ಬರೂ ಶಾಕ್ ತಗುಲಿ ಮೃತಪಟ್ಟರೆನ್ನಲಾಗಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಆಗಮಿಸಿದ  ವಿದ್ಯುತ್ ಇಲಾಖೆಯ ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನು ಕಡಿದು ಮಕ್ಕಳಿಬ್ಬರ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ.

Post a Comment

0 Comments