Ticker

6/recent/ticker-posts

Ad Code

ರಾತ್ರಿ ಊಟ ಮಾಡಿ ಮಲಗಿದ ಯುವಕನ ಮೃತದೇಹ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಕುಂಬಳೆ: ರಾತ್ರಿ ಊಟ ಮಾಡಿ ಮಲಗಿದ ಯುವಕನ ಮೃತದೇಹ  ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಂಬಳೆ ಮಾವಿನಕಟ್ಟೆ ನಿವಾಸಿ ಹರೀಶ್ ಗಟ್ಟಿಯವರ ಪುತ್ರ ನಿತಿನ್ ಕುಮಾರ್ ಗಟ್ಟಿ(25) ಮೃತಪಟ್ಟವರು. ಉವರು ಕುಂಬಳೆಯ ಲೈಟ್ ಅಂಡ್ ಸೌಂಡ್ ಸಂಸ್ಥೆಯೊಂದರ ನೌಕರರಾಗಿದ್ದಾರೆ‌. ನಿನ್ನೆ ರಾತ್ರಿ ಇವರು ಊಟ ಮಾಡಿ ಮಲಗಿದ್ದು ಇಂದು (ಮಂಗಳವಾರ) ಏಳದೇ ಇದ್ದು ಮನೆಯವರು ನೋಡಿದಾಗ ಮೃತದೇಹ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಂಬಳೆ ಪೊಲೀಸರು ಮಹಜರು ನಡೆಸಿದರು. ಮೃತದೇಹವನ್ನು ‌ಪೋಸ್ಟ್ ಮಾರ್ಟಂಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮೃತರು ತಂದೆ, ತಾಯಿ ಸಾವಿತ್ರಿ, ಸಹೋದರಿಯರಾದ ಅನುಷ, ಅಂಜುಷ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments