ಮಂಜೇಶ್ವರ: ಮಲಗುವ ಕೋಣೆಯ ಮಂಚದಡಿಯಲ್ಲಿ ಗೋಣಿ ಚೀಲದಲ್ಲಿ ತುಂಬಿಸಿ ಅಡಗಿಸಿಡಲಾಗಿದ್ದ 33.05 ಕಿಲೊ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಉಪ್ಪಳ ಸೋಂಕಾಲ್ ಕೌಶಿಕ್ ನಿಲಯದ ಎ.ಅಶೊಕ(45) ಎಂಬಾತನನ್ನು ಬಂಧಿಸಲಾಗಿದೆ.
ಮಂಜೇಶ್ವರ ಪೊಲೀಸರಿಗೆ ಲಭಿಸಿದ ರಹಸ್ಯ ಮಾಹಿತಿಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಬಂಧಿತ ಅಶೋಕ್ ಕಾಸರಗೋಡು ಜಿಲ್ಲೆಯ ವಿವಿದ ಕಡೆಗಳಿಗೆ ಗಾಂಜಾ ಪೂರೈಸುವ ಮುಖ್ಯ ಏಜಂಟ್ ಆಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠ ಬಿ.ವಿ.ವಿಜಯ ಭಾರತ್ ರೆಡ್ಡಿ ಅವರ ಆದೇಶದಂತೆ ಕಾಸರಗೋಡು ಡಿವೈಎಸ್ಪಿ ಸಿ.ಕೆ.ಸುನಿಲ್ ಕುಮಾರ್ ಅವರ ಮೇಲ್ನೋಟದಲ್ಲಿ ಮಂಜೇಶ್ವರ ಎಸ್.ಐ.ಕೆ.ಆರ್.ಉಮೇಶ್, ಇತರರಾದ ಅಜಯ್ ಎಸ್.ಮೆನೋನ್, ಅಥುಲ್ ರಾಂ,ರಾಜೇಶ್, ದರ್ಶನ, ಶಜೀಷ್, ಹರಿಪ್ರಸಾದ್, ಪ್ರಶೊಇಬ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು


0 Comments