ಕಾಸರಗೋಡು: ಇಲ್ಲಿನ ಹಳೆ ಬಸ್ಸು ನಿಲ್ದಾಣ ಪರಿಸರದ ಸ್ಟೇಟ್ ಹೋಟೆಲ್ ಬಳಿ ಕಾರ್ಯಾಚರಿಸುತ್ತಿರುವ ಇಸ್ವಾ ಫರ್ದಾಸ್ ಸಂಸ್ಥೆ ಬೆಂಕಿಗಾಹುತಿಯಾಗಿದೆ. ಇಂದು (ಸೋಮವಾರ) ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ನೀಡಿದ ಮಾಹಿತಿಯಂತೆ ಅಗ್ನಿಶಾಮಕ ದಳ ಸ್ಟೇಶನ್ ಆಫೀಸರ್ ಕೆ.ಹರ್ಷಾ, ವಿ.ಸುಕು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕಾಸರಗೋಡು, ಕಾಞಂಗಾಡ್, ಉಪ್ಪಳ ಅಗ್ನಿಶಾಮಕ ಕಚೇರಿಗಳಿಂದ ಐದು ಯುನಿಟ್ ಆಗಮಿಸಿತ್ತು. ಚೆರ್ಕಳ ಬಾಲಡ್ಕ ನಿವಾಸಿಯಾದ ಪಿ.ನಾಸರ್ ಎಂಬವರ ಸಂಸ್ಥೆ ಇದಾಗಿದೆ. ಪೆರ್ನಾಳ್ ಅಂಗವಾಗಿ ತಂದಿಳಿಸಿದ್ದ ಫರ್ದಾ, ಇತರ ವಸ್ತ್ರಗಳು ಹೊತ್ತಿ ಉರಿದಿವೆ. ಈ ಸಂಸ್ಥೆಯ ಮೇಲ್ಭಾಗದಲ್ಲಿ ಜವುಳಿ ರಖಂ ವ್ಯಾಪಾರ ಸಂಸ್ಥೆ, ಸಮೀಪದಲ್ಲಿ ಲಾಟರಿ ಅಂಗಡಿ ಎಂಬಿವು ಕಾರ್ಯಾಚರಿಸುತ್ತಿದೆ. ಬೆಂಕಿ ಅಕಸ್ಮಿಕದಿಂದಾಗಿ 50 ಲಕ್ಷ ರೂ ಗಳ ನಷ್ಟ ಅಂದಾಜಿಸಲಾಗಿದೆ. ಅಗ್ನಿಶಾಮಕ ದಳ ತಂಡದ ಸದಸ್ಯರಾದ ಪಿ.ಜಿ.ಜೀವನ್, ಎಂ.ರಮೇಶ, ಕೆ.ಆರ್.ಅಜೇಶ್, ವಿ.ಕೆ.ಶೈಜು, ಅಖಿಲ್ ಅಶೋಕನ್, ಗೋಕುಲ ಕೃಷ್ಣನ್, ಅಮಲ್ ರಾಜ್, ಜಿತಿನ್ ಕೃಷ್ಣ, ಹೋಂ ಗಾರ್ಡುಗಳಾದ ವಿ.ರಾಜು, ಎನ್.ಪಿ.ರಾಕೇಶ್, ಪಿ.ರಂಜಿತ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು
0 Comments