ಮೀಯಪದವು : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು' ಪ್ರಾಯೋಜಕತ್ವದಲ್ಲಿ ಶ್ರೀ ಅಯ್ಯಕೃಪಾ ಯಕ್ಷಗಾನ ಅಧ್ಯಯನಕೇಂದ್ರ ಬಾಳಿಯೂರು ಸಂಸ್ಥೆಯ ಆಶ್ರಯದಲ್ಲಿ ಎರಡು ತಿಂಗಳ ಉಚಿತ ಯಕ್ಷಗಾನ ತರಬೇತಿಯನ್ನು ಇತ್ತೀಚೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಯುತರು "ಯಕ್ಷಗಾನ ಕಲೆ ಭಾರತೀಯ ಸಂಸ್ಕೃತಿ, ಪುರಾಣ ಕತೆ, ಹಾಗೂ ಕನ್ನಡ ಭಾಷೆಯ ಉಳಿವಿಗೆ ದೊಡ್ಡ ಕೊಡುಗೆ ನೀಡಿದೆ. ಮಕ್ಕಳಲ್ಲಿ ಹಾಗೂ ಆಸಕ್ತರಿಗೆ ಯಕ್ಷಗಾನ ಕಲೆಯನ್ನು ಕಲಿಸಿ ಮುಂದಿನ ಪೀಳಿಗೆಗೆ ಕಲೆಯನ್ನು ದಾಟಿಸುವ ದೊಡ್ಡ ಕಾರ್ಯ ಅಕಾಡೆಮಿ ಹಮ್ಮಿ ಕೊಂಡಿದೆ" ಎಂದು ಅಭಿಪ್ರಾಯ ಪಟ್ಟರು.
ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಳಿಯೂರು ಇದರ ಅಧ್ಯಕ್ಷ ಮುತ್ತುಶೆಟ್ಟಿ ಬಾಳಿಯೂರು ಅಧ್ಯಕ್ಷತೆ ವಹಿಸಿದ್ದರು. ತಂಡದ ಯಕ್ಷಗಾನ ಗುರುಗಳಾದ ಶೇಖರ ಶೆಟ್ಟಿ ಬಾಯಾರು, ಶ್ರೀ ಅಯ್ಯಪ್ಪ ಮಂದಿರ ಬಾಳಿಯೂರು ಇಲ್ಲಿನ ಗುರುಸ್ವಾಮಿ ಶ್ರೀ ರಾಧಾಕೃಷ್ಣ ರೈ ಗೌರವ ಉಪಸ್ಥಿತಿ ಇದ್ದರು. ಶ್ರೀಮತಿ ತಾರಾಮಣಿ ವಿ ರೈ ಅಧ್ಯಾಪಕಿ ಸೈಂಟ್ ಜೋಸೆಫ್ ಪ್ರೌಢಶಾಲೆ ಬಜಾಲ್, ಶ್ರೀ ಅಶೋಕ್ ಕುಮಾರ್ ಡಿ ಅಧ್ಯಾಪಕರು ವಿದ್ಯಾವರ್ಧಕ ಎ.ಯು.ಪಿ.ಶಾಲೆ ಮೀಯಪದವು, ಶ್ರೀ ಅಶ್ವಿನಿ ಕಲ್ಲಗದ್ದೆ ಪ್ರಧಾನ ಸಂಚಾಲಕರು ಮೃತ್ಯುಂಜಯ ಯುವಕವೃಂದ ಕಲ್ಲಗದ್ದೆ ಯೋಗೀಶ ರಾವ್ ಚಿಗುರುಪಾದೆ ಸಂಚಾಲಕರು, ಶ್ರೀ ಅಯ್ಯಪ್ಪ ಕೃಪಾ ಯಕ್ಷಗಾನ ಅಧ್ಯಯನ ಕೇಂದ್ರ ಬಾಳಿಯೂರು, ಅರವಿಂದಾಕ್ಷ ಭಂಡಾರಿ ದಡ್ಡಂಗಡಿ ಮುಖ್ಯಶಿಕ್ಷಕರು ವಿದ್ಯಾವರ್ಧಕ ಎ.ಯು.ಪಿ.ಶಾಲೆ ಮೀಯಪದವು, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿ ಸದಸ್ಯರಾದ ಸತೀಶ ಅಡಪ ಸಂಕಬೈಲು, ಹಾಗೂ ಯಕ್ಷಗಾನ ಗುರುಗಳಾದ ಶೇಖರ ಶೆಟ್ಟಿ ಬಾಯಾರು ಅವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು. ರಾಮಕೃಷ್ಣಸಂತಡ್ಕ ಸ್ವಾಗತಿಸಿ ಬ್ರಿಜೇಶ್ ಬಾಳಿಯೂರು ವಂದನಾರ್ಪಣೆ ಗೈದರು.
0 Comments