Ticker

6/recent/ticker-posts

ಕೊಟ್ಟಯಂ ಮೆಡಿಕಲ್ ಕಾಲೇಜಿನಲ್ಲಿ‌ ಕಟ್ಟಡ ಮುರಿದು ಮಹಿಳೆ ಮೃತಪಟ್ಟ ಘಟನೆ; ಆರೋಗ್ಯ ಸಚಿವೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿ ಒತ್ತಾಯ


 ಬದಿಯಡ್ಕ: ಕೊಟ್ಟಯಂ ಮೆಡಿಕಲ್ ಕಾಲೇಜಿನಲ್ಲಿ ಕಟ್ಟಡ ಮುರಿದು ಮಹಿಳೆ ಮೃತಪಟ್ಟ ಘಟನೆಯ ಹೊಣೆ ಹೊತ್ತು ಆರೋಗ್ಯ ಸಚಿವೆ ರಾಜೀನಾಮೆ ನೀಡಬೇಕೆಂದು ‌ಒತ್ತಾಯಿಸಿ ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿಯ ಆಶ್ರಯದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಯಿತು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಸಮಿತಿ ಅಧ್ಯಕ್ಷ ತಿರುಪತಿ ಕುಮಾರ್ ಉದ್ಘಾಟಿಸಿದರು ‌ ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ,  ಮುಂದಾಳುಗಳಾದ ಕೃಷ್ಣದಾಸ್, ಲೋಹಿತಾಕ್ಷನ್ ನಾಯರ್, ಸತೀಶ್ ಪೆರುಮುಂಡ,  ಚಂದ್ರಹಾಸ ಮಾಸ್ತರ್,  ಶಾಫಿ ಗೋಳಿಯಡ್ಕ, ವಿನ್ಸೆಂಟ್  ರಾಮಕೃಷ್ಣನ್, ಜಾನಿ, ನಿಜೀಶ್ ಪಟ್ಟಾಜೆ ಮೊದಲಾದವರು ಉಪಸ್ಥಿತರಿದ್ದರು

Post a Comment

0 Comments