Ticker

6/recent/ticker-posts

ನಿವೃತ್ತ ಅಂಚೆ ಉದ್ಯೋಗಿ ಲಕ್ಷ್ಮಿ ನಾಯ್ಕ್ ನೆಕ್ಕರೆಪದವು‌ ನಿಧನ

 




ಪೆರ್ಲ : ನಿವೃತ್ತ ಅಂಚೆ ಉದ್ಯೋಗಿ ಮಣಿಯಂಪಾರೆ ಸಮೀಪದ ನೆಕ್ಕರೆಪದವು‌ ನಿವಾಸಿ ಲಕ್ಷ್ಮಿ ನಾಯ್ಕ್ (65) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ಬೆಳಗ್ಗೆ  ನಿಧನರಾಗಿದ್ದಾರೆ. ನಿವೃತ್ತ ಮುಖ್ಯೋಪಾಧ್ಯಾಯ ಪಿ. ಕುಂಞಣ್ಣ ಮಾಸ್ತರ್ ಅವರ ಧರ್ಮಪತ್ನಿಯಾಗಿರುವ ಲಕ್ಷ್ಮಿ ಅವರು ಭಾರತೀಯ ಅಂಚೆ ಇಲಾಖೆಯಲ್ಲಿ ಸುದೀರ್ಘ ಕಾಲ ಅಂಚೆ ಮಾಸ್ತರ್ ಹುದ್ದೆಯಲ್ಲಿದ್ದುಕೊಂಡು ನಿವೃತ್ತರಾಗಿದ್ದರು. ಅಲ್ಪ ಕಾಲದ ಹಿಂದೆ ಇವರನ್ನು ಅಸೌಖ್ಯ ಕಾಡಿದ್ದು ಕಾಸರಗೋಡು, ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.  ಕಾಸರಗೋಡು ಪ್ರಧಾನ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದ ಇವರು ಬಳಿಕ ಶ್ರೀರಾಮಪೇಟೆ, ತಳಂಗರೆ, ವಿದ್ಯಾನಗರ,ಚೆರ್ಕಳ,ಪೆರ್ಲ, ಕುಂಬಳೆ,ಬಂದ್ಯೋಡು ಎಂಬೆಡೆಗಳ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಮೃತರು ಪತಿ ಹಾಗೂ ಮಕ್ಕಳಾದ ಅಭಿಲಾಷ್ ಪಿ.ಕೆ (ಇಂಜಿನಿಯರ್), ಆಶಾ ಕೆ.ಎಲ್.(ಉಪನ್ಯಾಸಕಿ),ಸೊಸೆ ದಿವ್ಯಾ,ಅಳಿಯ ಸೂರ್ಯರಾಜ್, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ. 

Post a Comment

0 Comments