Ticker

6/recent/ticker-posts

ಕುಂಬ್ಡಾಜೆ ಬಾಳೆಗದ್ದೆ ನಿವಾಸಿ ನಾರಾಯಾಣ ಮಣಿಯಾಣಿ ನಾಪತ್ತೆ, ಪೊಲೀಸರಿಗೆ ದೂರು


 ಬದಿಯಡ್ಕ: ಕುಂಬ್ಡಾಜೆ ಪಂಚಾಯತಿನ ಬಾಳೆಗದ್ದೆ ನಿವಾಸಿ ಕೊಗ್ಗು ಮಣಿಯಾಣಿ ಹಾಗೂ ಚಂದ್ರಾವತಿರವರಪುತ್ರ ನಾರಾಯಣ ಮಣಿಯಾಣಿ ( 48) ಇವರು ಎರಡು ದಿನದಿಂದ ನಾಪತ್ತೆಯಾಗಿದ್ದಾರೆ. ಕಪ್ಪು ಬಣ್ಣದ ಅಂಗಿ ಹಾಗೂ ಕಾವಿ ಬಣ್ಣದ ಪಂಚೆ ಧರಿಸಿದ್ದರು. ಇವರು ಕಾಯಿಮಲೆ ಪೆರ್ವತ್ತೋಡಿ ಪರಿಸರದಲ್ಲಿ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು. ಜುಲೈ 28 ಸೋಮವಾರದಂದು ಬೆಳಗ್ಗೆ ಕೆಲಸಕ್ಕೆ ಹೋದವರು ಸಂಜೆ ತನಕ ಕಾಯಿಮಲೆ ಪರಿಸರದಲ್ಲಿದ್ದರು. ಅಂದು ರಾತ್ರಿ ಮನೆಗೆ ಬಾರದ ಕಾರಣ ಮರುದಿನ (ಜುಲೈ 29) ಬೆಳಗ್ಗೆ ಸುತ್ತಮುತ್ತ ಪರಿಸರದಲ್ಲಿ ಹುಡುಕಾಡಲಾಯಿತು. ಆದರೆ ಇಲ್ಲಿ ತನಕ ಯಾವುದೇ ಮಾಹಿತಿ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಇವರ ತಮ ಉದಯಕುಮಾರ್ ಬದಿಯಡ್ಕ ಪೊಲೀಸರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Post a Comment

0 Comments