Ticker

6/recent/ticker-posts

ಗೆಳೆಯರ ಜತೆಗೆ ಸ್ನಾನ ಮಾಡುತ್ತಿದ್ದ ವೇಳೆ ದೇವಸ್ಥಾನದ ಕೊಳದಲ್ಲಿ ಬಿದ್ದ ಮೂರುವರೆ ಪವನು ಚಿನ್ನಾಭರಣವನ್ನು ಪತ್ತೆ ಹಚ್ಚಿದ ಅಗ್ನಿಶಾಮಕ ದಳ


 ಗೆಳೆಯರ ಜತೆಗೆ ಸ್ನಾನ ಮಾಡುತ್ತಿದ್ದ ವೇಳೆ ದೇವಸ್ಥಾನದ ಕೊಳದಲ್ಲಿ ಬಿದ್ದ ಮೂರುವರೆ ಪವನು ಚಿನ್ನಾಭರಣವನ್ನು ಅಗ್ನಿಶಾಮಕ ದಳದ ಸಿಬಂದಿಗಳು ಹಾಗೂ ಮುಳುಗು ತಜ್ಞರು ಪತ್ರೆ ಹಚ್ಚಿದ ಘಟನೆ ನಡೆದಿದೆ. ಕಾಞಂಗಾಡ್ ತೆರಯವತ್ ಅರಯಿಲ್ ಭಗವತೀ ಕ್ಷೇತ್ರದ  ಕೊಳದಲ್ಲಿ ಯುವಕನ ಚಿನ್ನಾಭರಣ ಬಿದ್ದಿದೆ. ಸೋಮವಾರ ಸಂಜೆ ಈ ಘಟನೆ ನಡೆದಿತ್ತು. ಅಂದು ರಾತ್ರಿ ಹಾಗೂ ನಿನ್ನೆ ( ಸೋಮವಾರ) ಬೆಳಗ್ಗೆ ಹುಡುಕಾಡಿದರೂ ಚಿನ್ನ ಸಿಗಲಿಲ್ಲ

    ನಿನ್ನೆ ಮದ್ಯಾಹ್ನ ಅಗ್ನಿಶಾಮಕ ದಳದ ಅಧುಕಾರಿಗಳಿಗೆ ಮಾಹಿತಿ ನೀಡಲಾಯಿತು. ಕಾಞಂಗಾಡ್ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿ ಆದರ್ಶ್ ಅಶೊಕನ್ ಅವರ ನೇತೃತ್ವದಲ್ಲಿ ಸ್ಕೂಬಾ ತಂಡದ ಮುಳುಗು ತಜ್ಞರು ಆಗಮಿಸಿ ಮೂರುವರೆ ಅಡಿ ಆಳದಲ್ಲಿ ಕೆಸರಿನಲ್ಲಿ ಸಿಲುಕಿದ್ದ ಚಿನ್ನವನ್ನು ಪತ್ತೆ ಹಚ್ಚಿ ಅದರ ಮಾಲಕರಿಗೆ ನೀಡಿದರು.

Post a Comment

0 Comments