Ticker

6/recent/ticker-posts

ವಿ.ಎಸ್.ಅಚ್ಚುತಾನಂದನ್ ಅಂತ್ಯ ಸಂಸ್ಕಾರ ನಾಳೆ, ಸಾರ್ವಜನಿಕ ದರ್ಶನದ ನಂತರ ಇಂದು ಹುಟ್ಟೂರಿಗೆ ಮೆರವಣಿಗೆ.


 ತಿರುವನಂತಪುರಂ:  ನಿನ್ನೆ ನಿಧನರಾದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಚುತಾನಂದನ್ ಅವರ ಮೃತದೇಹ ಇಂದು ಬೆಳಗ್ಗೆ 9 ರಿಂದ ದರ್ಬಾರ್ ಹಾಲ್ ನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ನಿನ್ನೆ (ಸೋಮವಾರ) ತಿರ ಕವಡಿಯಾರ್ ನಲ್ಲಿರುವ ವಿ.ಎಸ್.ಅವರ ವಸತಿಗೆ ಮೃತದೇಹವನ್ನು ಕೊಂಡೊಯ್ಯಲಾಗಿತ್ತು. ಸಾವಿರಾರು ಜನರು ಅಗಲಿದ ವೀರ ನಾಯಕನಿಗೆ ಶ್ರದ್ದಾಂಜಲಿ ಅರ್ಪಿಸಿದರು. ತಿರುವನಂತಪುರಂ ಎ.ಕೆ.ಜಿ ಸೆಂಟರಿನಲ್ಲಿಯೂ ಮೃತದೇಹದ ಅಂತಿಮ ದರ್ಶನಕ್ಲಾಗಿ ಜನಜಂಗುಳಿ ಸೇರಿತ್ತು. ದರ್ಬಾರ್ ಹಾಲ್ ನಲ್ಲಿ ಅಂತಿಮ ದರ್ಶನದ ನಂತರ ಇಂದು ಮದ್ತಾಹ್ನ ಮೆರವಣಿಗೆಯ ಮೂಲಕ ಹುಟ್ಟೂರಾದ ಆಲಪ್ಪುಯಕ್ಕೆ ಕೊಂಡೊಯ್ಯಲಾಗುವುದು. ನಾಳೆ ಬೆಳಗ್ಗೆ ಆಲಪುಯ ಸಿಪಿಎಂ ಜಿಲ್ಲಾ ಕಾರ್ಯಾಲಯದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿದೆ. ನಾಳೆ ಮದ್ಯಾಹ್ನ ನಂತರ  ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

   ವಿ.ಎಸ್.ಅವರ ನಿಧನಾರ್ಥ ಇಂದು ರಾಜ್ಯದಲ್ಲಿ ಸಾರ್ವಜನಿಕ ರಜೆಯಾಗಿರುತ್ತದೆ.  ಇಂದು ಆರಂಭಿಸಬೇಕಿದ್ದ ಖಾಸಗಿ ಬಸ್ಸು ಮುಷ್ಕರ ಮುಂದೂಡಲಾಗಿದೆ.

Post a Comment

0 Comments