Ticker

6/recent/ticker-posts

ಆರೋಗ್ಯ ಕಾಯ್ದ ಕಾಟುಕುಕ್ಕೆ ಸುಬ್ರಾಯ ದೇವನಿಗೆ ಕತ್ತಿನ ಸ್ವರ್ಣ ಪದಕ ಸಮರ್ಪಿಸಿದ ಭಕ್ತೆ


ಪೆರ್ಲ : ದೈವಿಕ ನಂಬಿಕೆಯಲ್ಲಿ ಅಗೋಚರ ಶಕ್ತಿಯೊಂದು ಇದೆ .ಅಂತಹ ಅವ್ಯಕ್ತ ಕಾರಣೀಕತೆಗೆ ನಿದರ್ಶನವಾಗಿ ಹೊತ್ತ ಹರಕೆ ಫಲಿಸಿದ ಫಲವಾಗಿ ಭಕ್ತರೊಬ್ಬರು ತಮ್ಮ ಕತ್ತಿನ ಸ್ವರ್ಣ ಪದಕವನ್ನೇ ತಾ ನಂಬಿದ  ದೇವನಿಗೆ ಸಮರ್ಪಿಸಿ ಕೃತಾರ್ಥರಾದ ಘಟನೆಯೊಂದು ಕಾಟುಕುಕ್ಕೆಯಲ್ಲಿ ನಡೆದಿದೆ. 

ಕಾಟುಕುಕ್ಕೆ ಸಮೀಪದ ಪ್ರಸಾದ್ ಕುಂಚಿನಡ್ಕ ಎಂಬವರು ತಮ್ಮ  ಮಾತೃಶ್ರೀಯವರು ಅನಾರೋಗ್ಯದ ಸಂದರ್ಭದಲ್ಲಿ ಶೀಘ್ರ ಗುಣಮುಖಳಾದರೆ ಸ್ವಾಮಿ ಸುಬ್ರಾಯ ದೇವರಿಗೆ ತಮ್ಮ ಕತ್ತಿನ ಸ್ವರ್ಣ ಪದಕ ಸಮರ್ಪಿಸುವೆನೆಂದು ಪ್ರಾರ್ಥಿಸಿಗೊಂಡಿದ್ದರಂತೆ.  ಹರಕೆಯ ಪ್ರಾರ್ಥನೆಯನ್ನು ದೇವರು ಕೈಗೂಡಿಸಿಕೊಟ್ಟ ಕಾರಣ ಮಂಗಳವಾರ  ಸ್ವರ್ಣ ಪದಕವನ್ನು ಶ್ರೀ ದೇವರಿಗೆ ಪೂಜಾ ಸಮಯದಲ್ಲಿ  ಸಮರ್ಪಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ಮಧುಸೂದನ‌ ಪುಣ್ಚಿತ್ತಾಯ ಪ್ರಾರ್ಥಿಸಿ ಪ್ರಸಾದ ನೀಡಿದರು.ಕ್ಷೇತ್ರ ಆಡಳಿತ ಮೊಕ್ತೇಸರ ಪಡ್ಡಂಬೈಲ್ ಗುತ್ತು  ತಾರನಾಥ ರೈ ಪೆರ್ಲ ಉಪಸ್ಥಿತರಿದ್ದರು.

Post a Comment

0 Comments