Ticker

6/recent/ticker-posts

ಖಾಸಗಿ ವ್ಯಕ್ತಿ ಹಿತ್ತಿಲಿನಲ್ಲಿ 170 ಅನಧಿಕೃತ ಗ್ಯಾಸ್ ಸಿಲಿಂಡರ್, ಗ್ಯಾಸ್ ತುಂಬಿಸುವ ಉಪಕರಣ ಪತ್ತೆ,


 ಕಾಸರಗೋಡು: ಚೆಂಗಳ  ಚೇರೂರಿನಲ್ಲಿ ಅನಧಿಕೃತ ಗ್ಯಾಸ್ ಸಿಲಿಂಡರುಗಳ ಸಂಗ್ರಹ ಪತ್ತೆಹಚ್ಚಲಾಗಿದೆ. 170 ಸಿಲಿಂಡರುಗಳು, ಗ್ಯಾಸ್ ತುಂಬಿಸುವ ಉಪಕರಣಗಳನ್ನು ಸಹ ಪತ್ತೆಹಚ್ಚಲಾಗಿದೆ. ಖಾಸಗಿ ವ್ಯಕ್ತಿಯೋರ್ವರ ಹಿತ್ತಲಿನಿಂದ ಇವು ವಶಪಡಿಸಲಾಗಿದೆ. ಕಾಸರಗೋಡು ಡಿ.ವೈ.ಎಸ್.ಪಿ. ಸಿ.ಕೆ.ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿನ ತಂಡ ಎಂಡಿಎಂಎ ಬೇಟೆಗೆಂದು ಆಗಮಿಸಿದಾಗ ಇವು ಪತ್ತೆಯಾಗಿವೆ. 


ಅನಂತರ ಕಾಸರಗೋಡು ತಾಲೂಕು ಸಪ್ಲೈ ಆಫೀಸರಿಗೆ ಮಾಹಿತಿ ನೀಡಲಾಯಿತು. ತಾಲೂಕು ಸಪ್ಲೈ ಆಫೀಸರ್ ಕೃಷ್ಣ ನಾಯ್ಕ, ರೇಶನಿಂಗ್ ಇನ್ಸ್ಪೆಕ್ಟರುಗಳಾದ ಪಿ.ಕೊರಗಪ್ಪ, ಇ.ಪ್ರಭಾಕರನ್, ದಿಲೀಪ್ ಎಂಬಿವರ ನೇತೃತ್ವದ ತಂಡ ಪರಿಶೋಧನೆ ನಡೆಸಿದೆ. ಗೃಹಬಳಕೆಯ HP ಕಂಪನಿಯ 134 ಸಿಲಿಂಡರುಗಳು, 36  ವಾಣಿಜ್ಯ ಬಳಕೆಯ ಸಿಲಿಂಡರುಗಳನ್ನು ವಶಪಡಿಸಲಾಗಿದೆ.  ಅನಂತರ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ

Post a Comment

0 Comments