Ticker

6/recent/ticker-posts

ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಪತ್ರಿಕಾ ದಿನಾಚರಣೆ

 


"ಪತ್ರಿಕೆಗಳು ಜೀವಂತಿಕೆಗೊಂದು ನಿದರ್ಶನ"

ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಪತ್ರಿಕಾ ದಿನಾಚರಣೆ

ಕಾಸರಗೋಡು : ಕೋಟೆಕಣಿ ರಾಮನಗರ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ನೇತೃತ್ವದಲ್ಲಿ ಕನ್ನಡ ಪತ್ರಿಕಾ ದಿನಾಚರಣೆಯು ಮಂಗಳವಾರ ಅಪರಾಹ್ನ ಜರಗಿತು. 

ನಿವೃತ್ತ ಶಿಕ್ಷಕ,ಕ.ಸಾ.ಪ.ದ  ಸಂಘಟನಾ ಕಾರ್ಯದರ್ಶಿವಿಶಾಲಾಕ್ಷ ಪುತ್ರಕಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. 

ಹಿರಿಯ ಪತ್ರಕರ್ತ ವೀಜಿ ಕಾಸರಗೋಡು ಪತ್ರಿಕಾ ದಿನಾಚರಣೆಯ ಬಗ್ಗೆ  ಮುಖ್ಯ ಉಪನ್ಯಾಸಗೈಯುತ್ತಾ ಪತ್ರಿಕೋದ್ಯಮ  ಮುದ್ರಣ ಮಾಧ್ಯಮದಿಂದ ಇಂದಿನ ವಿದ್ಯುನ್ಮಾನ ಮಾಧ್ಯಮಕ್ಕೆ ಬದಲಾವಣೆಗೊಳ್ಳುತ್ತಿರುವ ಕಾಲಘಟದಲ್ಲಿಯೂ ಕಾಸರಗೋಡಿನಲ್ಲಿ ಪತ್ರಕರ್ತರು ಆಸೆ ಆಮಿಷ ಗಳಿಗೆ ಬಲಿ ಬೀಳದೆ ಸ್ಥಿತ ಪ್ರಜ್ಞತೆಯನ್ನು ಕಾಯ್ದುಕೊಂಡುರುವುದು ಸಾಮಾಜಿಕ ಸ್ಪಂದನೆಗೆ  ಪತ್ರಿಕೆಯ ಜೀವಂತಿಕೆಗೆ ನಿದರ್ಶನವಾಗಿದೆ ಎಂದರು.  

ವಿಶೇಷ ಚಾನೆಲ್ ಡಿಜಿಟಲ್ ಮೀಡಿಯಾದ ಪ್ರಧಾನ ಸಂಪಾದಕ ಜಯ ಮಣಿಯಂಪಾರೆ,

ಕೆ.ಸಿ.ಎನ್. ಚಾನೆಲ್ ನ ಉಪ ಸಂಪಾದಕಿ ಜಯಶ್ರೀ ಆರ್ಯಾಪು ಮಾತನಾಡಿದರು. ಕಾಸರಗೋಡಿನ ಸಾಮಾಜಿಕ, ಧಾರ್ಮಿಕ ಮುಂದಾಳು ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಸಭೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅಶೋಕ್‌ ಕೆ.ಕಾಸರಗೋಡು ಅವರಿಗೆ ಪತ್ರಿಕಾ ಗೌರವಾರ್ಪಣೆ ನೀಡಿ ಸನ್ಮಾನಿಸಲಾಯಿತು.ದಿವಾಕರ್ ಆಶೋಕ್ ನಗರ ಭಾವಗೀತೆಗಳನ್ನು ಹಾಡಿದರು.  

ಶ್ರೀರಾಮನಾಥ ಸಾಂಸ್ಕೃತಿಕ ಭವನದ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ವಂದಿಸಿದರು. ಜಗದೀಶ್ ಕೂಡ್ಲು ನಿರೂಪಿಸಿದರು.  

ಚಿತ್ರಗಳು : ಶ್ರೀಕಾಂತ್ ಕಾಸರಗೋಡು

Post a Comment

0 Comments