ಮಂಜೇಶ್ವರ : ಆನೆಕಲ್ಲು ಎ.ಯು.ಪಿ.ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಪಿ.ಟಿ.ಎ ಅಧ್ಯಕ್ಷರಾದ ಅಶ್ರಫ್. ಎ.ಎಂ ಆನೆಕಲ್ಲು ಇವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಶಿಕ್ಷಕಿ ರೇಣುಕಾ.ವಿ ಸ್ವಾಗತಿಸಿ, ವಾರ್ಷಿಕ ವರದಿ ಮತ್ತು ಆಯ ವ್ಯಯವನ್ನು ಮಂಡಿಸಿದರು. ಈ ಸಂದರ್ಭದಲ್ಲಿ ನಿರ್ಗಮನ ಪಿ. ಟಿ.ಎ ಅಧ್ಯಕ್ಷರಾದ ಅಶ್ರಫ್ ಎ.ಎಂ ಆನೆಕಲ್ಲು ಇವರನ್ನು ಸ್ಮರಣಿಕೆ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು. ಮಾತೃ ಮಂಡಳಿಯ ಅಧ್ಯಕ್ಷರಾದ ದೀಕ್ಷಿತ ಪಲ್ಲೇದಪಡ್ಪು,ಉಪಾಧ್ಯಕ್ಷೆ ಲೀಲಾವತಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಸೈನ್ಸ್ ವರ್ಕಿಂಗ್ ಮಾಡೆಲ್ ಸ್ಪರ್ಧೆಗೆ ಆಯ್ಕೆಯಾದ ಹಳೆ ವಿದ್ಯಾರ್ಥಿ ಅಬೂಬಕರ್ ಫಾಸಿಲ್ ಗೆ ಪ್ರಶಸ್ತಿ ಪತ್ರ ಹಾಗೂ ಟ್ರೋಫಿ ವಿತರಿಸಲಾಯಿತು.ಆನಂತರ 2025-26 ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ನೂತನ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ಹಿರಿಯ ಅಧ್ಯಾಪಕರಾದ ರವಿಶಂಕರ್ ಮಾಸ್ಟರ್ ನಡೆಸಿಕೊಟ್ಟರು. ನೂತನ ಅಧ್ಯಕ್ಷರಾಗಿ ಪ್ರಶಾಂತ್ ಬಗಂಬಿಲ ಮತ್ತು ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ ಅಶೋಕ್ ಮಾಸ್ಟರ್ ಕೊಡ್ಲಮೊಗರು ಅವಿರೋಧವಾಗಿ ಆಯ್ಕೆಯಾದರು. ಮಾತೃ ಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಶೋಭಾ ಹಾಗೂ ಉಪಾಧ್ಯಕ್ಷೆಯಾಗಿ ಶ್ರೀಮತಿ ಭವ್ಯ ಶ್ರೀ ಹಾಗೂ 16 ಮಂದಿ ಸದಸ್ಯರನ್ನು ಆಯ್ಕೆಮಾಡಲಾಯಿತು. ಈ ಸಂದರ್ಭದಲ್ಲಿ ಸ್ಕೂಲ್ ಪ್ರೊಟೆಕ್ಟ್ ಗ್ರೂಪ್ ನ ವತಿಯಿಂದ ಮಾದಕ ವ್ಯಸನದ ಜಾಗೃತಿಯ ಕುರಿತು ಪೋಷಕರಿಗೆ ಜನ ಮೈತ್ರಿ ಪೊಲೀಸ್ ಅಧಿಕಾರಿ ಮಧು ವಿಶೇಷ ಮಾಹಿತಿಯನಿತ್ತರು. ನಿವೃತ್ತ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಭಟ್ ತಮ್ಮ ಸೇವಾವಧಿಯ ಸುಂದರ ಅನುಭವದ ಕ್ಷಣಗಳನ್ನು ಹಂಚಿಕೊಂಡರು. ರಕ್ಷಕ- ಶಿಕ್ಷಕ ಸಂಘದ ವತಿಯಿಂದ ಉಡುಗೊರೆಯಾಗಿ ಶಾಲೆಗೆ ಕಪಾಟ್ ಒಂದನ್ನು ಹಸ್ತಾಂತರ ಮಾಡಲಾಯಿತು.
ಶಿಕ್ಷಕರಾದ ಹರೀಶ.ವಿ ವಂದಿಸಿದರು. ಸಂತೋಷ್ ಕುಮಾರ್.ಕೆ ಕಾರ್ಯಕ್ರಮ ನಿರೂಪಿಸಿದರು.
0 Comments