Ticker

6/recent/ticker-posts

ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷರ ವಿರುದ್ದ ವಿರೋಧ ಪಕ್ಷವಾದ ಬಿಜೆಪಿ ಅವಿಶ್ವಾಸ ಗೊತ್ತುವಳಿಗೆ ನೋಟೀಸ್


 ಕುಂಬಳೆ:  ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷರ ವಿರುದ್ದ ವಿರೋಧ ಪಕ್ಷವಾದ ಬಿಜೆಪಿ ಅವಿಶ್ವಾಸ ಗೊತ್ತುವಳಿಗೆ ನೋಟೀಸ್ ನೀಡಿದೆ. ಕಳೆದ ನಾಲ್ಕೂವರೆ ವರ್ಷಗಲಕ ಭ್ರಷ್ಟಾಚಾರ ಆಡಳಿತದಿಂದ  ಬೇಸತ್ತ ಅವಿಶ್ವಾಸ ಗೊತ್ತುವಳಿ ನೋಟೀಸ್ ನೀಡಲಾಗಿದೆಯೆಂದು ಬಿಜೆಪಿ ಸದಸ್ಯರು ತಿಳಿಸಿದ್ದಾರೆ. ಬಿಜೆಪಿ ಸದಸ್ಯರುಗಳಾದ ಪ್ರೇಮಾವತಿ, ಪ್ರೇಮಲತ ಎಸ್, ಸುಲೋಚನ.ಪಿ, ಶೋಭ ಎಸ್, ವಿದ್ಯ.ಎನ್.ಪೈ,  ಪುಷ್ಪಲತ, ವಿವೇಕಾನಂದ ಶೆಟ್ಟಿ, ಅಜಯ್ ಎಂ, ಮೋಹನ್ ಕೆ ಎಂಬಿವರು ಅವಿಶ್ವಾಸ ಗೊತ್ತುವಳಿ ನೋಟೀಸ್ ನಲ್ಲಿ ಸಹಿ ಹಾಕಿದ್ದಾರೆ

23 ಮಂದಿ ಸದಸ್ಯರುಳ್ಳ ಕುಂಬಳೆ ಪಂಚಾಯತಿನಲ್ಲಿ  ಮುಸ್ಲಿಂ ಲೀಗ್ 7,  ಲೀಗ್ ಬಂಡುಕೋರನಾಗಿ ಸ್ಪರ್ದಿಸಿ ಗೆದ್ದ ಓರ್ವ, ಎಸ್.ಡಿ.ಪಿ.ಐ.ಯ ಓರ್ವ ಸದಸ್ಯ, ಕಾಂಗ್ರೆಸ್ 2 ಸದಸ್ಯರನ್ನು ಹೊಂದಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಉಳಿದಂತೆ ಬಿಜೆಪಿ 9,  ಸಿಪಿಎಂಗೆ ಇಬ್ಬರು ಪಕ್ಷೇತರರು ಸಹಿತ 3 ಮಂದಿ ಸದಸ್ಯರಿದ್ದಾರೆ. 

  ಇತ್ತೀಚೆಗೆ ಕುಂಬಳೆ ಬಸ್ಸು ನಿಲ್ದಾಣದಲ್ಲಿ  ನಿರ್ಮಿಸಿದ ನಾಲ್ಕು ತಂಗುದಾಣಗಳ ನಿರ್ಮಾಣ  ಭ್ರಷ್ಟಾಚಾರದಿಂದ ಕೂಡಿದ್ದು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.

Post a Comment

0 Comments