ಪೆರ್ಲ : ಮಾಜಿ ಮುಖ್ಯಮಂತ್ರಿ ಸಿಪಿಐಎಂ ನ ಹಿರಿಯ ಮುಂದಾಳು ವಿ.ಎಸ್. ಅಚ್ಚುತಾನಂದನ್ ಅವರ ಅಗಲುವಿಕೆಗೆ ಸಂತಾಪ ವ್ಯಕ್ತಪಡಿಸಿ ಎಡಪ್ರಜಾಪ್ರಭುತ್ವ ರಂಗ ಹಾಗೂ ಸಹ ಸಂಘಟನೆಗಳ ನೇತೃತ್ವದಲ್ಲಿ ಇಂದು ಸಂಜೆ ಮೌನ ಮೆರವಣಿಗೆ ಹಾಗೂ ಸಂತಾಪ ಸೂಚಕ ಸಭೆ ನಡೆಯಿತು. ಸಿಪಿಐಎಂ ಕುಂಬಳೆ ಏರಿಯ ಸಮಿತಿ ಸದಸ್ಯ ನಾಸಿರುದ್ದೀನ್ ಮಲಂಗರ, ಎರಿಯ ಸಮಿತಿ ಸದಸ್ಯ ವಿನೋದ್ ಪೆರ್ಲ, ರಾಮಕೃಷ್ಣ ರೈ, ಮುಂದಾಳುಗಳಾದ ಅಬ್ದುಲ್ಲ ನಡುಬೈಲ್, ಚನಿಯಪ್ಪ ಪೂಜಾರಿ ಅಲಾರ್, ಮೊಹಮ್ಮದ್ ಹನೀಫ್ ನಡುಬೈಲ್, ಸೂರಜ್ ಬಾಕಿಲಪದವು,ಇಬ್ರಾಹಿಂ ಮಾಸ್ತರ್ ಗುಣಾಜೆ,ಅಬ್ದುಲ್ಲ ಬಾಳಿಗ,ವೈ ನಾರಾಯಣ ಮೊದಲಾದವರು ಭಾಗವಹಿಸಿದ್ದರು. ಸಿಪಿಐಎಂ ಲೋಕಲ್ ಸಮಿತಿ,ಸಿಐಟಿಯು, ಡಿವೈಎಫ್ ಐ ಸಹಿತ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
0 Comments