ಕಾಸರಗೋಡು : ಚೆಂಗಳ ಗ್ರಾಮ ಪಂಚಾಯತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಸಂತ ಅಜಕ್ಕೋಡು ಅವರಿಗೆ ಅಂಬೇಡ್ಕರ್ ವಿಚಾರ ವೇದಿಕೆಯ ವತಿಯಿಂದ ಅಭಿನಂದನಾ ಪೂರ್ವಕವಾಗಿ ಅಂಬೇಡ್ಕರ್ ರ ಭಾವಚಿತ್ರವನ್ನು ನೀಡಲಾಯಿತು. ಕವಿ, ಪತ್ರಕರ್ತ ರಾಧಾಕೃಷ್ಣ.ಕೆ.ಉಳಿಯತ್ತಡ್ಕ, ವಿಚಾರ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಗಂಗಾಧರ ಗೋಳಿಯಡ್ಕ, ಚೆಂಗಳ ಗ್ರಾಮ ಪಂಚಾಯತು ಸದಸ್ಯ ಹನೀಫ ನೆಕ್ರಾಜೆ, ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ , ಪ್ರಧಾನ ಕಾರ್ಯದರ್ಶಿ ಸುಂದರ ಬಾರಡ್ಕ, ಕಾರ್ಯದರ್ಶಿ ಸುರೇಖ ಬಾರಡ್ಕ, ಸುರೇಶ ಅಜಕ್ಕೋಡು ಉಪಸ್ಥಿತರಿದ್ದರು.

0 Comments