Ticker

6/recent/ticker-posts

Ad Code

ಬೆಳ್ಳೂರಿನಲ್ಲಿ ಕೊಡೆ ಹಿಡಿದು ಗದ್ದುಗೇರಿದ ಬಿಜೆಪಿಗೆ ಹ್ಯಾಟ್ರಿಕ್ ಅಧಿಕಾರದ ಸಂಭ್ರಮ


ಬೆಳ್ಳೂರು: ಬೆಳ್ಳೂರು ಪಂಚಾಯಿತಿಯಲ್ಲಿ ಕೊಡೆ ಚಿಹ್ನೆಯಡಿ ಸ್ಪರ್ಧಿಸಿದ ಬಂಡಾಯ ಅಭ್ಯರ್ಥಿ ಹಾಗೂ ಇನ್ನೊಬ್ಬ ಸ್ವತಂತ್ರ ಅಭ್ಯರ್ಥಿಯ ಬೆಂಬಲದೊಂದಿಗೆ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆಗೇರಿದೆ. ಪಂಚಾಯಿತಿಯ 10ನೇ ವಾರ್ಡ್ ಬೆಳ್ಳೂರಿನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಮಾಲಿನಿ ಎ.ಅಧ್ಯಕ್ಷರಾಗಿ ಹಾಗೂ 8ನೇ ವಾರ್ಡ್ ಕಕ್ಕೆಬೆಟ್ಟುವಿನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪುರುಷೋತ್ತಮ ಸಿ.ವಿ. ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮಾಲಿನಿ ಎ.ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು ಕುಟುಂಬಶ್ರೀ ಅಧ್ಯಕ್ಷೆಯಾಗಿದ್ದರು. ಪುರುಷೋತ್ತಮ ಸಿ.ವಿ.ಮೂರನೆ ಬಾರಿ ವಾರ್ಡ್ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ಈ ಹಿಂದೆಯೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯಿಸಿದ್ದ ಅವರು ಎರಡು ಬಾರಿಯೂ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. 

ಬೆಳ್ಳೂರು ಪಂಚಾಯಿತಿಯಲ್ಲಿ ಬಿಜೆಪಿ 6, ಸಿಪಿಎಂ 4, ಕಾಂಗ್ರೆಸ್ 2 ಹಾಗೂ 2 ವಾರ್ಡ್ ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಜಯಗಳಿಸಿದ್ದರು. ಯಾರಿಗೂ ಸ್ಪಷ್ಟ ಬಹುಮತವಿಲ್ಲದ ಕಾರಣ ಬಿಜೆಪಿಗೆ ಅಧಿಕಾರ ಉಳಿಸಿಕೊಳ್ಳಲು ಇಬ್ಬರು ಸ್ವತಂತ್ರ ಅಭ್ಯರ್ಥಿಯ ಬೆಂಬಲ ಪಡೆಯಬೇಕಾಗಿ ಬಂದಿದೆ. ಗೀತಾ ಕೆ. ಅವರ ಅಮಾನತು ಕ್ರಮವನ್ನು ಹಿಂಪಡೆದು ಶುಕ್ರವಾರ ರಾತ್ರಿ 9ರ ವೇಳೆ ನಡೆದ ಕೊನೆ ಸುತ್ತಿನ ಮಾತುಕತೆಯಲ್ಲಿ ಗೀತಾ ಅವರ ಮನ ಒಲಿಸಿ ಬೆಂಬಲದ ಭರವಸೆ ಪಡೆಯಲಾಗಿದೆ.

5ನೇ ವಾರ್ಡ್ ಕಾಯರ್ ಪದವಿನಲ್ಲಿ ಪಕ್ಷದ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪಂಚಾಯಿತಿ ಉಪಾಧ್ಯಕ್ಷೆಯೂ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆಯೂ ಆಗಿದ್ದ ಗೀತಾ ಕೆ. ಅವರನ್ನು ಬಿಜೆಪಿ ಪಕ್ಷದ ಎಲ್ಲಾ ಜವಾಬ್ದಾರಿ ಹಾಗೂ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿತ್ತು. ಚುನಾವಣೆಯಲ್ಲಿ ಗೀತಾ ಕೆ. 183 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು‌.

ಗೀತಾ ಕೆ.ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ ಪುರುಷೋತ್ತಮ ಸಿ.ವಿ.ಬೆಂಬಲದೊಂದಿಗೆ ಬಿಜೆಪಿ ಸದಸ್ಯರ ಸಂಖ್ಯೆ ಎಂಟಕ್ಕೇರಿದೆ. ಇದರೊಂದಿಗೆ ಬಿಜೆಪಿ ಬೆಳ್ಳೂರಲ್ಲಿ ಸತತ ಮೂರನೇ ಬಾರಿ ಆಡಳಿತದ ಚುಕ್ಕಾಣಿ ಹಿಡಿದಿದೆ.

Post a Comment

0 Comments