ಮಂಜೇಶ್ವರ: ಜೆಸಿಬಿ ಮತ್ತು ಬೈಕ್ ಪರಸ್ಪರ ಡಿಕ್ಕಿ ಹೊಡೆದು ಬೈಕ್ ಸವಾರ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಮೊರತ್ತಣೆ ಎಂಬಲ್ಲಿ ನಡೆದಿದೆ. ಕೊಳ್ಯೂರ್ ನ ರಮೇಶ್ ಹೆರಳ ಮತ್ತು ಮಲ್ಲಿಕಾ ದಂಪತಿಯ ಏಕೈಕ ಪುತ್ರ ಓಂಕಾರ್ ಹೆರಳ (22) ಮೃತ ದುರ್ದೈವಿ. ನಿನ್ನೆ ಸಂಜೆ ಸುಮಾರು 7:30 ಗಂಟೆಗೆ ಮೊರತ್ತಣೆಯಲ್ಲಿ ಈ ಅಪಘಾತ ಸಂಭವಿಸಿದೆ. ಓಂಕಾರ್ ಕಡಂಬಾರ್ ನಿಂದ ಮನೆಗೆ ಹಿಂತಿರುಗುತ್ತಿದ್ದು ಮೊರತ್ತಣೆ ತಲುಪಿದಾಗ, ಎದುರಿನಿಂದ ಬಂದ ಜೆಸಿಬಿ ಓಂಕಾರ್ ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರ ಜೀವ ಉಳಿಸಲಾಗಲಿಲ್ಲ. ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ಜೆಸಿಬಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

0 Comments