ಪೆರ್ಲ : ಸುಮಾರು ಹದಿನೈದು ವರ್ಷಗಳ ಹಿಂದೆ ನಿರ್ಮಿಸಿದ್ದ ಮನೆಯೊಂದು ಶಿಥಿಲಾವಸ್ಥೆಯಿಂದ ಕುಸಿದಿದ್ದು ಬಢ ಕುಟುಂಬವೊಂದು ನಿರಾಶ್ರಿತವಾಗಿದೆ. ಇಲ್ಲಿನ ಎಣ್ಮಕಜೆ ಪಂಚಾಯತ್ ನ 10ನೇ ವಾರ್ಡ್ ಕಜಂಪಾಡಿಯ ಸರ್ಪಮಲೆಯಲ್ಲಿ ಪರಿಶಿಷ್ಟ ಜಾತಿಗೊಳಪಟ್ಟ ವೃದ್ದೆಯಾದ ಐತ್ತೆ ಎಂಬವರ ಮನೆಯಾಗಿದೆ ಮಂಗಳವಾರ ಮಧ್ಯಾಹ್ನ ಕುಸಿದು ಬಿದ್ದಿರುವುದು.ಬೀಳುವ ವೇಳೆ ಮನೆಯೊಳಗಿದ್ದ ಇವರು ಓಡಿದ್ದು ದುರಂತ ತಪ್ಪಿದಂತಾಗಿದೆ.
ಕಳೆದ ಹಲವಾರು ವರ್ಷಗಳಿಂದ ಹೊಸ ಮನೆ ನಿರ್ಮಾಣಕ್ಕಾಗಿ ಇವರು ನಿರಂತರ ಅರ್ಜಿ ಸಲ್ಲಿಸುತ್ತಾ ಬಂದಿದ್ದರೂ ಸಂಬಂದಪಟ್ಟವರು ನಿರ್ಲಕ್ಷಿಸಿದ್ದರು ಎನ್ನಲಾಗಿದೆ.
ಇವರ ಪತಿ ಬಾಬು ಇವರನ್ನು ಬಿಟ್ಟು ಬೇರೆ ವಿವಾಹಿತರಾಗಿದ್ದು ಇರುವ ಏಕೈಕ ಮಗಳು ಇವರ ಜತೆ ವಾಸಿಸುತ್ತಿದ್ದರು.ಇದೀಗ ಧೀಡಿರ್ ಮನೆ ಕುಸಿದಿದ್ದು ಉಳಿದುಕೊಳ್ಳಲು ಸ್ಥಳ ಇಲ್ಲವೆಂಬಂತಾಗಿದೆ. ಪರಿಶಿಷ್ಟ ಜಾತಿ ಅಭಿವೃದ್ಧಿಗೆ ಅದೇಷ್ಟೋ ಯೋಜನೆಗಳಿದ್ದರೂ ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಇಂತಹ ಅರ್ಹರಿಗೆ ದೊರಕದಂತಿದ್ದು ಈ ಬಗ್ಗೆ ಇನ್ನಾದರೂ ಜನಪ್ರತಿನಿಧಿಗಳು ಗಮನಹರಿಸಿ ಬಡವರಿಗೆ ಸರಕಾರದ ಸೌಲಭ್ಯ ಕಲ್ಪಿಸಿ ಕೊಡುವಲ್ಲಿ ಮುತುವರ್ಜಿವಹಿಸಬೇಕಾಗಿದೆ.


0 Comments