ಕಾಸರಗೋಡು : ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬನಿಗೆ ಕಾಡುಕೋಣ ತಿವಿತಕ್ಕೊಳಗಾದ ಘಟನೆ ಪಾಣತ್ತೂರಿನಲ್ಲಿ ನಡೆದಿದೆ. ಕಮ್ಮಾಡಿಯ ಕೆ.ಕೆ. ರಾಮನ್ (46) ಪಾಣತ್ತೂರು ಎಸ್ಟೇಟ್‌ನಲ್ಲಿ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ತಿವಿತಕ್ಕೊಳಗಾದ ರಾಮನ್ ರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆಗಾಗಿ ಸುಳ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

0 Comments