Ticker

6/recent/ticker-posts

Ad Code

ಪೆರ್ಲ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕೌತುಕ ಸೃಷ್ಠಿಸಿದ ಚೆನ್ನೆಮಣೆ ಆಟದ ಪಾಠ

ಪೆರ್ಲ : ತುಳುನಾಡಿನಲ್ಲಿ ಒಂದೊಮ್ಮೆ ಜನಜನಿತವಾಗಿದ್ದ ಚೆನ್ನೆಮಣೆ ಆಟವು ಇಂದು ತೆರೆಯ ಮರೆಗೆ ಸರಿದಿದ್ದು ಕೇರಳ ಶಿಕ್ಷಣ ಇಲಾಖೆಯು ಅದನ್ನು ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯ ವಿಷಯವನ್ನಾಗಿಸಿತ್ತು. ಚೆನ್ನೆ ಮಣೆ ಎಂದರೇನು, ಕಾಯಿ ಎಂದರೇನು, ಆಟ ಹೇಗೆಂದು ಅರಿಯದ ಪುಟಾಣಿಗಳಿಗೆ ಇದು ಕೌತುಕದ ವಿಷಯವಾಗಿತ್ತು. ಮಕ್ಕಳ ಕುತೂಹಲ ನೀಗಿಸಲು ಪೆರ್ಲ ಶ್ರೀಸತ್ಯನಾರಾಯಣ ಎಎಲ್ ಪಿ ಶಾಲಾ ಅಧ್ಯಾಪಕ, ಮಕ್ಕಳ ರಂಗ ತಜ್ಞ ಉದಯ ಸಾರಂಗ್ ಸ್ವತಃ  ಪುರಾತನವಾದ ಚೆನ್ನೆಮಣೆ ತರಿಸಿ, ಕಾಯಿಗಳನ್ನು ಸಂಗ್ರಹಿಸಿ ಪಾಠದಲ್ಲಿದ್ದ ಚೆನ್ನೆಮಣೆ ಆಟ ಆಡುವ ಮತ್ತು ಮಕ್ಕಳಿಂದಲೇ ಆಡಿಸುವ ಮೂಲಕ ಹೊಸ ಜನಾಂಗದ ಪುಟಾಣಿಗಳಿಗೆ ಪರಂಪರಾಗತ ಆಟದ ಅರಿವಿನ ಜ್ಞಾನ ಸೃಷ್ಟಿಸಿದರು. ಕುತೂಹಲಭರಿತ ಚೆನ್ನೆಮಣೆಯನ್ನು ಕೈಯಲ್ಲಿ ಎತ್ತಿ ಸುತ್ತಲು ಕುಳಿತು ಆಡಿ ಮಕ್ಕಳು ಮುದಗೊಂಡರು.

Post a Comment

0 Comments